ಕಲ್ಲಿನ ಅವಶೇಷಗಳು ಪತ್ತೆ..

330

ಬಳ್ಳಾರಿ / ಹೊಸಪೇಟೆ:ಐತಿಹಾಸಿಕ ಕಮಲಾಪುರ ಕೆರೆಯ ದಡದ ಮೇಲೆ ವಿಜಯನಗರ ಕಾಲದ ಮಂಟಪಗಳ ಕಲ್ಲಿನ ಅವಶೇಷಗಳು, ಶನಿವಾರ ಪತ್ತೆಯಾಗಿವೆ.

ಕೆರೆಯ ದಡದ ರಸ್ತೆ ದುರಸ್ತಿ ಕಾರ್ಯ ಮಾಡುವ ಸಂದರ್ಭದಲ್ಲಿ ರಸ್ತೆ ಬದಿಯ ಮಣ್ಣಿನಲ್ಲಿ ಹುದಗಿದ್ದ ಪುರಾತನ ಕಪ್ಪು ಕಲ್ಲಿನಲ್ಲಿ ಕೆತ್ತನ ಮಾಡಿದ ಅವಶೇಷಗಳು, ಗೋಚರವಾಗಿವೆ.

ಕಲ್ಲಿನ ಮೇಲೆ ಆನೆ ಹಾಗೂ ಕಮಲದ ಹೂ ಕೆತ್ತನೆ ಮಾಡಲಾಗಿದ್ದು, ದೇವಾಲಯ ಹಾಗೂ ಮಂಟಪದ ಭಾಗದ ಅವಶೇಷಗಳು ಇರಬಹುದು ಎಂದು ರಾಜ್ಯ ಪುರಾತತ್ವ ಸವೇಕ್ಷಣಾ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಸ್ಮಾರಕಗಳು ಧ್ವಂಸವಾಗುತ್ತಿವೆ. ಯುನೆಸ್ಕೊ ಘೋಷಿತ ಕೋರ್ ಜೋನ್ ವ್ಯಾಪ್ತಿಯ ಕಮಲಾಪುರಕೆರೆ ಏರಿಯಲ್ಲಿ ಹುದುಗಿದ್ದ ಬಳಪದ ಕಲ್ಲಿನ ಗಾಳಿ ಗೋಪುರ ಅಥವಾ ಮಂಟಪದ ಅವಶೇಷಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಲು ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ ನಿಷ್ಕಾಳಜಿಯನ್ನು ತೋರುತ್ತಿದೆ ಎಂದು ರಾಜ್ಯ ಕಾರ್ಯ ಕಾರಿಣಿ ಸದಸ್ಯ, ಜನಸಂಗ್ರಾಮ ಪರಿಷತ್ ಶಿವುಕುಮಾರ ಮಾಳಗಿ ಆರೋಪಿಸಿದ್ದಾರೆ.

ಈ ಪ್ರದೇಶದಲ್ಲಿ ಪುರಾತತ್ವ ಉತ್ಖನನ ಕಾರ್ಯಕೈಗೊಂಡು, ಸಾಧ್ಯವಾದರೆ ಅಲ್ಲಿ ಲಭ್ಯವಿರುವ ಅವಶೇಷಗಳಿಂದಲೇ ಆ ಮರು ನಿರ್ಮಾಣಕ್ಕೆ ಮುಂದಾಗಬೇಕು. ಖಂಡಿತವಾಗಿಯೂ ಇದು ಐತಿಹಾಸಿಕ ಕಮಲಾಪುರಕೆರೆ ಯ ಸೌಂದರ್ಯವನ್ನು ಹೆಚ್ಚಿಸಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದೇ ಬಗೆಯ ಮಂಟಪದ ಅವಶೇಷಗಳು ಕೆರೆ ಏರಿಯ ಕೆಳಗಿರುವ ಗಣೇಶ ದೇವಸ್ಥಾನ ಮತ್ತು ಎರಡನೇಯ ತೂಬಿನ ಮಧ್ಯದಲ್ಲಿ ಕಂಡುಬರುತ್ತವೆ. ಅಲ್ಲದೇ, ಕೆರೆಯ ಕೋಡಿಯ ಬಳಿಯ ಕಮಾನು ಬಾಗಿಲು, ನರಸಿಂಹ ಆಂಜನೇಯ ದೇವಸ್ಥಾನ ಮತ್ತು ಅದರ  ಹುಡೇವು (ಕಾವಲು ಗೋಪುರ) ಕೂಡ ಶಿಥಿಲವಾಗಿದ್ದು ಇವೆಲ್ಲವುಗಳನ್ನು ಸಂರಕ್ಷಣೆ ಮಾಡಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

–ಕೋಟ್—–

ರಸ್ತೆ ಬದಿಯ ಮಣ್ಣಿನಲ್ಲಿ ಹುದಗಿದ್ದ ಪುರಾತನ ಕಪ್ಪು ಕಲ್ಲಿನಲ್ಲಿ ಕೆತ್ತನ ಮಾಡಿದ ಅವಶೇಷಗಳು, ಗೋಚರವಾಗಿವೆ.

ಕಲ್ಲಿನ ಮೇಲೆ ಆನೆ ಹಾಗೂ ಕಮಲದ ಹೂ ಕೆತ್ತನೆ ಮಾಡಲಾಗಿದ್ದು, ದೇವಾಲಯ ಹಾಗೂ ಮಂಟಪದ ಭಾಗದ ಅವಶೇಷಗಳು ಇರಬಹುದು. ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ಮಂಜುನಾಧ ನಾಯ್ಕ
ಪುರಾತತ್ವ ಸಹಾಯಕರು,
ರಾಜ್ಯ ಪುರಾತತ್ವ ಸವೇಕ್ಷೇಣಾ ಇಲಾಖೆ ಹಂಪಿ.