ಕೊಲೆ ಆರೋಪಿತರಿಗೆ ಜೀವಾವಧಿ ಶಿಕ್ಷೆ

238

ರಾಯಚೂರು-ರಾಯಚೂರು ನಗರದ ಹೊರವಲಯದಲ್ಲಿರುವ ಯರಮರಸ್ ಬೈಪಾಸ್ ರಸ್ತೆಯಲ್ಲಿ ದಿನಾಂಕ ನವೆಂಬರ್10 2010 ರಂದು ರಾತ್ರಿ ಸುಮಾರು 11 ಗಂಟೆಗೆ ಆರೋಪಿತರಾದ ಸಂಗಟಿ ಬಸ್ಸಪ್ಪ, ಹನುಮಂತ, ಮಹಾದೇವಿ, ಚಂದಮ್ಮ ಹಾಗೂ ಈರಣ್ಣ ಇವರು ಮೃತ ಶ್ರೀನಿವಾಸನೊಂದಿಗೆ ವೈಷಮ್ಯದಿಂದ ಅವನನ್ನು ಕೊಲೆ ಮಾಡುವ ಉದ್ದೇಶದಿಂದ ಸಂಗಟಿ ಬಸ್ಸಪ್ಪ ರಾಡಿನಿಂದ ಹನುಮಂತ ಮತ್ತು ಕಟ್ಟಿಗೆಗಳಿಂದ ಇವರು ಕೈಗಳಿಂದ ಹೊಡೆದು ಕೊಲೆ ಮಾಡಿ ಬಿಡಿಸಲು ಬಂದ ಮಾರಪ್ಪ ಇವರಿಗೆ ನೀವು ಇಲ್ಲಿಂದ ಹೋಗಿ ಇಲ್ಲಿ ಇದ್ದರೆ ನೀವು ಉಳಿಯುವುದಿಲ್ಲ ಅಂತ ಅಂದು ಪುರಾವೆ ನಾಶಪಡಿಸುವ ಉದ್ದೇಶದಿಂದ ಶವವನ್ನು ರೈಲು ಹಳಿಗೆ ಹಾಕಿದರ  ಈ ಕುರಿತು ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ಪೂರೈಸಿದ ಜಿ.ಹರೀಶ ಸಿ.ಪಿ.ಐ. ದೋಷಾರೋಪಣ ಪತ್ರ ಸಲ್ಲಿಸಿದರು.

ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿದ ಮಾನ್ಯ 1ನೇಯ ಆಪರ ಸತ್ರ ನ್ಯಾಯಾಧೀಶರಾದ ಎಂ.ಮಹಾದೇವಯ್ಯ ಅವರು ನಾಲ್ಕು ಜನರಿಗೆ ಜೀವಾವಧಿ ಕಾರಾಗೃಹವಾಸ ಶಿಕ್ಷೆ ಹಾಗೂ ತಲಾ 25,000 ಸಾವಿರ ರೂಪಾಯಿಗಳ ದಂಡ ವಿಧಿಸಿದ್ದು. ಪುರಾವೆ ನಾಶಪಡಿಸದಕ್ಕಾಗಿ ಈರಣ್ಣನಿಗೆ 3 ವರ್ಷ ಕಾರಾಗೃಹವಾಸ ಶಿಕ್ಷೆ ಹಾಗೂ 5000 ರೂಪಾಯಿಗಳ ದಂಡ ವಿಧಿಸಿರುತ್ತಾರೆ.

ಸರಕಾರದ ಪರವಾಗಿ ಜಿ.ಸುದರ್ಶನ್ ವಿಶೇಷ ಸಾರ್ವಜನಿಕ ಆಭಿಯೋಜಕರು ವಾದವನ್ನು ಮಂಡಿಸಿದರು ಎಂದು ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.