ಹೆತ್ತ ಮಗನಮೇಲೆ ಆಣೆ, ಬಿಜೆಪಿಪಕ್ಷ ಬಿಟ್ಟು ಎಲ್ಲೂ ಹೋಗಲ್ಲ ಎಂದ ಮಾಜಿ ಶಾಸಕರು.

301

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಮಾಜಿ ಶಾಸಕರು ಬಿಜೆಪಿ ಬಿಟ್ಟು ಜೆಡಿಎಸ್ ಗೆ ಹೋಗ್ತಾರಂತೆ ಎಂಬ ಸುದ್ದಿ ಹರಡಿತ್ತು.ಇದೇ ವಿಚಾರವಾಗಿ ತಾಲೂಕಿನ ಬಿಜೆಪಿ ಪಕ್ಷದ ಮುಖಂಡರಲ್ಲಿ ಮತ್ತು ಕಾರ್ಯಕರ್ತರಿಗೂ ದುಕಡೆ ಅನುಮಾನ. ಕಾಡುತಿತ್ತು, ಈ ಹಿನ್ನಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ಕರೆಯಲಾಗಿತ್ತು.

ಪತ್ರಿಕಾಗೋಷ್ಟಿಯಲ್ಲಿ ಮನಸು ಬಿಚ್ಚಿ ಮಾತನಾಡಿದ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಇಲ್ಲಸಲ್ಲದ ವಿಚಾರಗಳಿಗೆ ನನ್ನ ಮೇಲೆ ಅನುಮಾನಗಳು ಬೇಡ ಎಂದರು. ನಾನು ನನ್ನ ಹೆತ್ತಮಗನ ಮೇಲೆ ಆಣೆಮಾಡಿ ಹೇಳುತ್ತೇನೆ ಬಿಜೆಪಿ ಪಕ್ಷ ಬಿಟ್ಟು ಎಲ್ಲೂ ಹೋಗಲ್ಲ ಕೆಲವರು ಯಾರೋ ತಾಲೂಕಿನ ಮತದಾರಲ್ಲಿ ಗೊಂದಲ ಸೃಷ್ಟಲಿಕ್ಕೆ ಈ ರೀತಿ ಅಂತೆ-ಕಂತೆಗಳನ್ನು ಸೃಷ್ಠಿಸಿದ್ದಾರೆ ಹೊರಿತು ನಾನು ಎಲ್ಲೂ, ಯಾರಿಗೂ ನಾನು ಬಿಜೆಪಿ ಪಕ್ಷ ಬಿಡುತ್ತೇನೆ ಅಂತಾನೂ ಹೇಳಿಕೆ ನೀಡಿಲ್ಲ ಅಥವಾ ಜೆಡಿಎಸ್ ಪಕ್ಷಕ್ಷೆ ಹೋಗುತ್ತೇನೆ ಎಂದೂ ಹೇಳಿಕೆ ನೀಡಿಲ್ಲವಾದರೂ,ಯಾರೋ ತಮ್ಮತಮ್ಮಲಾಭಕ್ಕಾಗಿ ನನ್ನ ಹೆಸರು ಬಳಸಿ ಕೊಂಡಿರಬಹುದು ಅದಕ್ಕೂ ನನಗೂ ಸಂಬಂಧವಿಲ್ಲಾ ಎಂದರು.
ಅಷ್ಟೇ ಅಲ್ಲ ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಶಾಸಕ ಅಭ್ಯರ್ಥಿ ನಾನೆ. ಎಂದು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪ ಮಾತುಕೊಟ್ಟು ಆಗಿದೆ ಅದಲ್ಲದೆ ನಾನು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಪಕ್ಷ ಸೇರ್ಪಡೆಗೊಂಡಾಗ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡು ನನ್ನಗೆಲುವಿಗೆ ಕಾರಣೀಭೂತರಾದ ಕೆಎಂ.ಹನುಮಂತರಾಪ್ಪನವರು ಮತ್ತು ಪಕ್ಷದ ಎಲ್ಲ ಮುಖಂಡರೂ,ಕಾರ್ಯಕರ್ತರು ನನ್ನ ಅನ್ನತಮ್ಮಂದಿರಂತೆ ಹಗಲಿರುಳು ದುಡಿದ ನಮ್ಮ ಐದು ವರರ್ಷದ ಸಾರ್ಥಕ ಸೇವೆಗೆ ಎಲ್ಲರೂ ಸಹಕಾರಿಗಲಾಗಿರುವಾಗ ಇಂಥವರನ್ನು ಬಿಟ್ಟು ನಾನ್ಯಾಕೆ ಜೆಡಿಎಸ್ ಪಕ್ಷಕ್ಕೆ ಹೋಗಲಿ ಎಂದರು. ಇಂಥಹ ನನ್ನ ಜನ, ನನ್ನ ಪಕ್ಷ ಬಿಜೆಪಿಯನ್ನು ತೊರೆಯುವ ಯೋಚನೆ ನನ್ನ ಕನಸು ಮನಸಿನಲ್ಲೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಒಟ್ಟಾರೆ ಅಂತೆ-ಕಂತೆಗಳಿಗೆ ತೆರೆ ಎಳೆದ ಮಾಜಿಶಾಸಕ ಜೆ.ನರಸಿಂಹಸ್ವಾಮಿ ಪಕ್ಷದ ಸಂಘಟನೆಗೆ ವಿನಾಯಕ ಚವಿತಿಯಂದೇ ಮುಹೂರ್ತ ನಿಗಧಿಪಡಿಸಿದ್ದು ಅದೇದಿನ ರಾಜಘಟ್ಟ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ತೀರ್ಮಾನಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಕೇಂದ್ರ ರೇಷ್ಮೆಮಂಡಳಿ ಅಧ್ಯಕ್ಷ, ಕೆಎಂ.ಹನುಮಂತರಾಯಪ್ಪ. ಬಿಜೆಪಿ ರಷ್ಟ್ರೀಯ ಸಮಿತಿ ಸದಸ್ಯರು ಜೋ,ನ,ಮಲ್ಲಿಕಾರ್ಜುನ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾಶಿವಶಂಕರ್, ಅಶ್ವತ್ಥ್ ನಾರಾಯಣಕುಮಾರ್, ಹನುಮಂತೇಗೌಡ, ಕೆಎಂ,ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಕಾರ್ಯದರ್ಶಿ ನಾಗರಾಜು, ನಗರಾಧ್ಯಕ್ಷ ಕೆಹೆಚ್.ರಂಗರಾಜು, ಸೇರಿದಂತೆ ಮಹಿಳಾಮೋರ್ಚಾ ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರೂ ಅನೇಕರು ಉಪಸ್ಥಿತರಿದ್ದರು.