ಜೈಲಲ್ಲಿದ್ದೇ..ಬಿಲ್ಡರ್ ಗಳಿಗೆ ರೋಲ್ ಕಾಲ್ ಗಾಗಿ ಬೆದರಿಕೆ..?

283

ಬೆಂಗಳೂರು/ಕೆ.ಆರ್.ಪುರ: ಜೈಲಿನಲ್ಲಿದ್ದುಕೊಂಡೇ ಉದ್ಯಮಿ ಹಾಗೂ ಬಿಲ್ಡರ್ ಗಳಿಗೆ ರೋಲ್ ಕಾಲ್ ಬೆದರಿಕೆ ಹಾಕ್ತಿದ್ರು.. ಪರಪ್ಪನ ಅಗ್ರಹಾರ ಟು ಕೆಆರ್ ಪುರಂ ಬಂದವ್ರು ಮಾಡಿದ್ದೇನು ಅನ್ನೋದಕ್ಕೆ ಈ ಸ್ಟೋರಿ ನೋಡಿ…
ಪರಪ್ಪನ ಅಗ್ರಹಾರದಲ್ಲಿದ್ದುಕೊಂಡೇ ನಡೆಸುತ್ತಿದ್ರು ಡೀಲ್..!
ಹಣ ಕೊಡದ ಉದ್ಯಮಿಗೆ ಜೈಲಿಂದ ಹೊರಬಂದು ಹಾಕಿದ್ರು ಸ್ಕೆಚ್..! ಕೆಆರ್ ಪುರಂನ ಕಾರು ಉದ್ಯಮಿ ಚಂದ್ರಶೇಖರ್ ರೆಡ್ಡಿಗೆ ಲಾಂಗು ಮಚ್ಚು ತೋರಿಸಿ ಬೆದರಿಕೆ ಹಾಕಿದ್ದ ಇವರನ್ನು ಕೆಆರ್ ಪುರಂ ಪೊಲೀಸ್ರು ಬಂಧಿಸಿದ್ದಾರೆ. ಮೋಹನ್ , ರಾಘವೇಂದ್ರ , ಆಂಜನೇಯ ರೆಡ್ಡಿಯನ್ನು ಬಂಧಿಸಲಾಗಿದೆ. ಆದ್ರೆ ಮಾಜಿ ಕಾರ್ಪೋರೆಟರ್ ಪತಿ ಸಿರ್ಪುರ್ ಶ್ರೀನಿವಾಸ್ ಕೊಲೆ ಕೇಸ್ ನ ಆರೋಪಿ ಪ್ರತಾಪ್ ಎಂಬಾತನೇ ಈ ಕೇಸಿನ ಪ್ರಮುಖ ಆರೋಪಿಯಾಗಿದ್ದು. ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದಾಗಲೇ ಚಂದ್ರಶೇಖರ್ ಗೆ ಬೆದರಿಕೆ ಹಾಕಿದ್ದ.. ಜೈಲಿನಿಂದ ಹೊರಬಂದವನೇ ಹಣ ಕೊಡದ ಕಾರಣಕ್ಕೆ ತನ್ನ ಸಹಚರರನ್ನು ಕಳುಹಿಸಿ ಬೆದರಿಸಿದ್ದ ಎನ್ನಲಾಗ್ತಿದೆ..

ಬೈಟ್;

ಇನ್ನು ಚಂದ್ರಶೇಖರ್ ರೆಡ್ಡಿಯನ್ನು ಬೆದರಿಸಿದ್ದಲ್ಲದೇ ಕಾರನ್ನು ಸಹ ಕಿರಾತಕರು ಕಿತ್ತು ಪರಾರಿಯಾಗಿದ್ರು.. ಲಕ್ಷ ಲಕ್ಷ ಹಣವನ್ನು ನೀಡುವಂತೆ ಬೆದರಿಕೆ ಹಾಕಿ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ರು.. ಇದೇ ಕಾರಣಕ್ಕೆ ಜೈಲಿನಲ್ಲಿ ಪರಿಚಯವಾಗಿದ್ದ ಕೆಲ ಪುಡಿ ರೌಡಿಗಳ ಸಹಾಯವನ್ನು ಪಡೆದಿದ್ದು.. ಪೊಲೀಸ್ರು ಪ್ರಮುಖ ಆರೋಪಿ ಪ್ರತಾಪ್ ಗಾಗಿ ಬಲೆ ಬೀಸಿದ್ದಾರೆ..

ಬೈಟ್. ಎಂ ನಾರಾಯಣ್, ಡಿಸಿಪಿ, ವೈಟ್ ಫೀಲ್ಡ್

ಸದ್ಯ ಕೆಆರ್ ಪುರ ಪೊಲೀಸ್ರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆಯನ್ನು ತೀವ್ರಗೊಳೊಸಿದ್ದಾರೆ. ಆದ್ರೆ ಪರಪ್ಪನ ಅಗ್ರಹಾರ ಜೈಲು ಕೈದಿಗಳ ಬದಲಾವಣೆ ಕಾರಣವಾಗದ್ದೇ ಮತ್ತಷ್ಟು ಕೃತ್ಯ ಎಸಗಲು ಲೈಬ್ರರಿ ಮತ್ತು ಸಹಚರರ ಗುಂಪು ತಾಣ ಆಗ್ತರೋದು ದುರಂತವೇ ಸರಿ.