ಸ್ವಚ್ಛತಾ ಆಂದೋಲನ ಕಾರ್ಯಕ್ರಮ

283

ಬಳ್ಳಾರಿ:ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ-ಸ್ವತಃ ಚರಂಡಿಗೆ ಇಳಿದು ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಮುಂದಾದ ಪಾಲಿಕೆ ಸದಸ್ಯ-24 ನೇ ವಾರ್ಡಿನಲ್ಲಿ ಇಂದಿನಿಂದ ಸ್ವಚ್ಛತಾ ಆಂದೋಲನ-ಪ್ರತಿ ದಿನ ಒಂದು ಗಂಟೆ ಸ್ವಚ್ಛತೆ ಮಾಡಲು ನಿರ್ಧಾರ

ಕಳೆದೆರಡು ವರ್ಷಗಳಿಂದ ಯಾವುದೇ ಸ್ವಚ್ಛತೆ, ಕುಡಿಯುವ ನೀರು ಇತರೆ ಸೌಲಭ್ಯ ನೀಡದೇ ನಿರ್ಲಕ್ಷ್ಯ ತಾಳಿದ್ದ ಮಹಾನಗರ ಪಾಲಿಕೆ ವಿರುದ್ಧ ಸಿಡಿದೆದ್ದಿರುವ ಪಾಲಿಕೆ ಸದಸ್ಯ .ಗೋವಿಂದರಾಜುಲು ಇಂದಿನಿಂದ ತಾವೇ ಖುದ್ದಾಗಿ ಚರಂಡಿ ಸ್ವಚ್ಛತೆಗೆ ಮುಂದಾಗಿದ್ದಾರೆ.
24 ನೇ ವಾರ್ಡಿನ ಟೇಲರ್ ಬೀದಿಯಿಂದ ಆರಂಭವಾದ ಅವರ ಸ್ಬಚ್ಛತಾ ಆಂದೋಲನ ಪಾಂಡುರಂಗ ಗುಡಿ, ಆಂಥೋನಿ ಬೀದಿ, ನಾಲಾ ಬಂದಿ, ಓಲ್ಡ್ ಎಂಪ್ಲಾಯ್‌ಮೆಂಟ್ ಬೀದಿ, ಬಾರ್ಬರ್ ಬೀದಿಗಳಲ್ಲಿನ ಬೃಹತ್ ಗಾತ್ರದ ತೆರೆದ ಚರಂಡಿಗೆ ಇಳಿದು ಸ್ವಚ್ಛತೆ ನಡೆಸಿದ್ರು.

ಸಂಸದ ಬಿ.ಶ್ರೀರಾಮುಲು ಮತ್ತು ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರ ಸಲಹೆ ಮೇರೆಗೆ ಇಂದಿನಿಂದ ಚರಂಡಿ ಸ್ವಚ್ಛಗೊಳಿಸುತ್ತಿರುವುದಾಗಿ ಗೋವಿಂದರಾಜುಲು ಈವೇಳೆ ಮಾಧ್ಯಮದವರಿಗೆ ಹೇಳಿದ್ರು. ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ಪ್ರತಿ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು. ಪ್ರತಿದಿನ ಮಾಸ್ ಮಾದರಿಯಲ್ಲಿ ಖುದ್ದು ಬಿ.ಶ್ರೀರಾಮುಲು ಮತ್ತು ಜಿ.ಸೋಮಶೇಖರ್ ರೆಡ್ಡಿ ಅವರು ಪಾಲಿಕೆಯ ಎಲ್ಲ ಸದಸ್ಯರೊಂದಿಗೆ ಚರಂಡಿ ಸ್ವಚ್ಛಗೊಳಿಸುತ್ತಿದ್ದರು. ನಗರದ ಸ್ವಚ್ಛತೆ ಹಾಗೂ ಸುಂದರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ರು. ಇದೀಗ ಪ್ರತಿದಿನ ಅವರ ಸಲಹೆ ಮೇರೆಗೆ ಸ್ವಚ್ಛತಾ ಆಂದೋಲನ‌ ಕೈಗೊಂಡಿರುವುದಾಗಿ ಗೋವಿಂದರಾಜುಲು ಹೇಳಿದ್ರು.
ಈ ಸಂದರ್ಙದಲ್ಲಿ ಪಾಲಿಕೆ ಆಯುಕ್ತ ಎಂ.ಕೆ.ನಲವಡಿ, ಬಿಜೆಪಿ ಮುಖಂಡರಾದ ನೂರ್ ಬಾಷಾ, ಜಿಲಾನ್, ನಾಗರಾಜರೆಡ್ಡಿ, ತಿಮ್ಮಪ್ಪ, ರಮೇಶ್, ಭಟ್ಟಿ ಎರಿಸ್ವಾಮಿ ಇನ್ನಿತರರು ಕೂಡ ಸಾಥ್ ನೀಡಿದ್ರು.
ಪೌರ‌ ಕಾರ್ಮಿಕರು ಮತ್ತು ಸಾರ್ವಜನಿಕರು ಕೂಡ ಗೋವಿಂದರಾಜುಲು ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ರು.

ಬೈಟ್: ೧) ಎಂ.ಗೋವಿಂದರಾಜುಲು, ಸದಸ್ಯರು, ಮಹಾನಗರ ಪಾಲಿಕೆ, ಬಳ್ಳಾರಿ.

೨) ಎಂ.ಕೆ.ನಲವಡಿ, ಆಯುಕ್ತರು, ಬಳ್ಳಾರಿ ಮಹಾನಗರ ಪಾಲಿಕೆ,.