ಬಿ ಜೆ ಪಿ ಪಕ್ಷಕ್ಕೆ ಸೇರ್ಪಡೆ

281

ಬಳ್ಳಾರಿ /ಹೊಸಪೇಟೆ:ಶಾಸಕ ಪರಣ್ಣ ಮನವಳ್ಳಿ ಹಾಗೂ ಮಾಜಿ ಶಾಸಕ ರತನ್ ಸಿಂಗ್ ಸಮ್ಮುಖದಲ್ಲಿ ಮಹಿಳೆಯರು ಮತ್ತು ಯುವಕರು, ಮಂಗಳವಾರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ನಗರದ ಪಾಟೇಲ್ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಸಂದೀಪ್ ಸಿಂಗ್ ಅಧ್ಯಕ್ಷತೆಯಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಇದೇ ವೇಳೆ 9 ನೇ ವಾರ್ಡಿನಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಸಿದ ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು, ಮನೆ ಮನೆಗೆ ತೆರಳಿ, ಪರಿಸರ ಜಾಗೃತಿ ಮೂಡಿಸಿದರು. ಹಾಲು ಪ್ರಕೊಷ್ಠ ಸಹ ಸಂಚಾಲಕ ಹಾಗೂ ವಿಸ್ತಾರಕ ಜನಾರ್ಧನ ರೆಡ್ಡಿ, ಮಹಿಳಾ ಮೊರ್ಚಾ ಅಧ್ಯಕ್ಷರು ಕವಿತಾ ಈಶ್ವರ ಸಿಂಗ್, ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಜೀವರತ್ನಂ, ತಿಮ್ಮಪ್ಪ ಯಾದವ್, ಭಾಗ್ಯ, ಹನುಮಂತ, ಸುಬ್ರಹ್ಮಣ್ಯ, ಬೆಳಗೊಡ್ ಮಂಜುನಾಥ್, ಗೋವಿಂದ್, ಶ್ರೀಕಾಂತ್, ಭರ್ಮ್ಪ್ಪ, ರಾಘವೇಂದ್ರ ,ಚಿತ್ರಗಾರ, ಮಂಜುನಾಥ್, ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು