ಉಚಿತ ಎಲ್.ಪಿ.ಜಿ ಗ್ಯಾಸ್ ವಿತರಣೆ..

277

ಬಳ್ಳಾರಿ:ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಘಟಕವು ಗ್ರಾಮಾಂತರ ಕ್ಷೇತ್ರದ ಹಳೆ ಮೋಕ, ಹೊಸ ಮೋಕ, ಬೆಣಕಲ್ಲು, ಸಿಂಧವಾಳ, ಗೋನಾಳ್,ಜಾಲಿಹಳ್ಳಿ ಬೊಮ್ಮನಹಳ್ಳಿ, ಕಾರೆಕಲ್ಲು ಕ್ಷೇತ್ರದಲ್ಲಿ ಇಂದು ಎಲ್.ಪಿ.ಜಿ ಗ್ಯಾಸ್ ಸಂಪರ್ಕ ಇಲ್ಲದ ಬಡವರಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಎಲ್.ಪಿ.ಜಿ ಗ್ಯಾಸ್ ವಿತರಣೆ ಮಾಡಲಾಯಿತು. ಗ್ರಾಮಾಂತರ ಮಂಡಲದ 203 ಬೂತ್ ಗಳಲ್ಲಿ ಸದಸ್ಯತ್ವ ಅಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮ ಎಲ್ಲಾ ಬೂತ್ ಮಟ್ಟದಲ್ಲಿ ನಡೆಸಲಾಯಿತು. ಇದೇವೇಳೆ ಮುಖಂಡರ ಸಮ್ಮುಖದಲ್ಲಿ ಸಭೆನಡೆಸಿ ವಿಸ್ತಾರಕರ ಕಾರ್ಯಚಟುವಟಿಕೆಗಳನ್ನು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಘಟಕದ ಉಪಾಧ್ಯಕ್ಷ ಎಸ್. ಗುರುಲಿಂಗ ಗೌಡ, ಗ್ರಾಮಾಂತರ ಕ್ಷೇತ್ರದ ವಿಸ್ತಾರಕ ರವೀಂದ್ರ ರೆಡ್ಡಿ, ಗ್ರಾಮಾಂತರ ಕ್ಷೇತ್ರದ ಮುಖಂಡ ಓಬಳೇಶ್, ಪೊಂಪಪತಿ, ಕ್ರಿಷ್ಣ ರೆಡ್ಡಿ ಹಾಗೂ ಮೋಕ ಕ್ಷೇತ್ರದ ಬಿಜೆಪಿಯ ಎಲ್ಲಾ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯರುಗಳು,ಪಧಾದಿಕಾರಿಗಳು,ಕಾರ್ಯಕರ್ತರು ಪಾಲ್ಗೊಂಡಿದ್ದರು.