ಸ್ತ್ರೀ ಶಕ್ತಿ ಗುಂಪುಗಳ ಸಭೆ..

246

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ನಗರಸಭೆ ಸಭಾಂಗಣ ದಲ್ಲಿ ಮಂಗಳವಾರದಂದು ವಿವಿಧ ಸ್ತ್ರೀ ಶಕ್ತಿ ಗುಂಪುಗಳಿಗೆ ನಗರಸಭೆ ಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ಎನ್ ಮುನಿಸ್ವಾಮಿ ಮಹಿಳೆಯರು ಸ್ವಾಲಂಭಿಗಳಾಗಿ ಜೀವನ ನಡೆಸಲು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ವಾಗಿ ಅಭಿವೃದ್ಧಿ ಹೊಂದ ಬೇಕೆಂದು ಪೌರಾಯುಕ್ತ ಎನ್ ಮುನಿ ಸ್ವಾಮಿ ರವರು ಕರೆ ನೀಡಿದರು.

ನಗರಸಭೆಯಲ್ಲಿ ದೊರೆಯುವ ವಿವಿಧ ಸವಲತ್ತುಗಳ ಮಾಹಿತಿ ಬಗ್ಗೆ ಸ್ತ್ರೀ ಶಕ್ತಿ ಗುಂಪು ಗಳಿಗೆ ಪೌರಾಯುಕ್ತ ಎನ್.ಮುನಿ ಸ್ವಾಮಿ ರವರು ಮಾಹಿತಿ ನೀಡಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದ ಬೇಕೆಂದು ಜಾಗೃತಿ ಮೂಡಿಸಿದರು.
ಇದಕ್ಕೂ ಮುನ್ನ ವಿವಿಧ ಸ್ತ್ರೀ ಶಕ್ತಿ ಗುಂಪು ಗಳಿಗೆ ಸರ್ಕಾರದಿಂದ ದೊರೆಯುವ ವಿವಿಧ ಯೋಜನೆ ಗಳ ಬಗ್ಗೆ ನಗರಸಭೆಯ ಮಂಜುನಾಥ್ ರವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಸುಜಾತ ಶಿವಣ್ಣ, ಉಪಾಧ್ಯಕ್ಷರಾದ ಸುಜಾತ ಶಿವಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಶ್ರೀರಾಮಪ್ಪ ,ಸೇರಿದಂತೆ ಸ್ತ್ರೀ ಶಕ್ತಿ ಗುಂಪುಗಳ ನೂರಾರು ಮಹಿಳೆಯರು ಭಾಗವಹಿಸಿದ್ದರು.