ಅಂತು ಹಂಪಿಗೆ ಮಳೆ ಬಂತು..

342

ಬಳ್ಳಾರಿ /ಹೊಸಪೇಟೆ:ಮಳೆ ಸಿಂಚನದಲ್ಲಿ ವಿಶ್ವ ಪ್ರಸಿದ್ಧ ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಲು ಎರಡೂ ಕಣ್ಣು ಸಾಲದು.

ಹೌದು! ಐತಿಹಾಸಿಕ ಹಂಪಿಯ ಪರಿಸರ ಮಳೆಯಲ್ಲಿ ಇನ್ನಷ್ಟು ಮನಮೋಹಕವಾಗಿ ಗೋಚರಿಸುವ ಮೂಲಕ ಪ್ರವಾಸಿಗರನ್ನು ತನ್ನತ್ತ ಸಳೆಯುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಂಗಳವಾರ ಸುರಿದ ಮಳೆಗೆ ಹೇಮಕೂಟದಲ್ಲಿ ಸಣ್ಣದಾದ ಜಲಪಾತವೇ ಸೃಷ್ಠಿಯಾಗಿ, ಮನಸ್ಸಿಗೆ ಮುದ ನೀಡುವಂತಿತ್ತು. ಮಳೆ ನಿಂತರೂ, ಹರಿಯುವ ನೀರಿನ ಕಲವರ ಪ್ರವಾಸಿಗರ ಕಣ್ಮನ ತಣಿಸಿತು.

ಇಲ್ಲಿ ಮಾತ್ರವಲ್ಲ, ಮಳೆಗಾಲದಲ್ಲಿ ಹಂಪಿಯ ಕೆಲ ಪ್ರಸಿದ್ಧ ಸ್ಮಾರಕಗಳ ಬಳಿ ಇರುವ ಬೆಟ್ಟ-ಗುಡ್ಡಗಳ ನಡುವೆ ಹರಿಯುವ ನೀರು ಸಣ್ಣನೇ ಜಲಪಾತದಂತೆ ಕಂಡು ಬರುತ್ತವೆ. ಹೀಗಾಗಿ ಸ್ಥಳೀಯ ಛಾಯಗ್ರಾಹಕರು, ದೇಶ-ವಿದೇಶದ ಪ್ರವಾಸಿಗರು, ಹಂಪಿಯತ್ತ ಮುಖ ಮಾಡುತ್ತಾರೆ.

ಮಳೆಯಲ್ಲಿ ಹಂಪಿಯ ಪುರಾತನ ಸ್ಮಾರಕಗಳ ಶಿಲ್ಪ ವೈಭವ ನೋಡುವುದೇ ಕಣ್ಣಿಗೆ ಹಬ್ಬನ್ನುಂಟು ಮಾಡುತ್ತದೆ. ಹೀಗಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೇ, ಪ್ರವಾಸಿಗರು, ಸ್ಮಾರಕಳ ಮನಮೋಹಕ ದೃಶ್ಯವನ್ನು ಕಂಡು ಸಂಭ್ರಮಿಸುತ್ತಾರೆ.