ಮುಳುಗಡೆ ಸಂತ್ರಸ್ತರ ಪ್ರತಿಭಟನೆ.

383

ಬಾಗಲಕೋಟೆ : ಕೃಷ್ಣಾ ಮೆಲ್ದಂಡೆ ಯೊಜನೆಯ ಪುನರ್ವಸತಿ,ಪುನರ್ ನಿರ್ಮಾಣಕ್ಕಾಗಿ ಭೂಮಿಕಳೆದುಕೊಳ್ಳುತ್ತಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೆಕೆಂದು ಆಗ್ರಹಿಸಿ ಕಳೆದ ಐದು ದಿನಗಳಿಂದ ನವನಗರದ ಆರ್ ಆ್ಯಂಡ್ ಆರ್ ಕಚೆರಿ ಮುಂದೆ ಸಂತ್ರಸ್ತರು ಧರಣಿ ನಡೆಸ್ತಿದ್ದಾರೆ. ಜಿಲ್ಲೆಯ ಬಿಳಗಿ ತಾಲುಕಿನ ಕುಂದರಗಿ,ಜಾನಮಟ್ಟಿ,ಸುನಗ್ ಗ್ರಾಮ ಸೆರಿದಂತೆ ಏಳು ತಾಂಡಾಗಳ ಸಂತ್ರಸ್ತರು ಅಧಿಕಾರಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು.ಸಂತ್ರಸ್ತರ 5ನೆ ದಿನದ ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡರು ಭಾಗಿಯಾದ್ರು.ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು ಸವದಿ, ಎಂಎಲ್ಸಿ ಹಣಮಂತ್ ನಿರಾಣಿ,ಜಿಂ.ಪಂ ಸದಸ್ಯ ಹೂವಪ್ಪ ರಾಠೋಡ್ ಹಾಗೂ ಮಹಾಂತೆಶ್ ಮಮದಾಪೂರ ನೇತೃತ್ವದಲ್ಲಿ ಆರ್ ಆಂಡ್ ಆರ್ ಕಚೇರಿ ಮುತ್ತಿಗೆಗೆ ಯತ್ನ ನಡೆಯಿತು.ಎಎಸ್ಪಿ ಲಕ್ಷ್ಮೀ ಪ್ರಸಾದ್ ಮದ್ಯಪ್ರವೇಶಿಸಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಂಡ್ರು.ನಂತರ ಆರ್ ಆಂಡ್ ಆರ್ ಅಧಿಕಾರಿ ಜೊತೆ ಮಾತನಾಡಿದ ಸಂತ್ರಸ್ತರು ಹಾಗೂ ಬಿಜೆಪಿ ಮುಖಂಡರು ಮುಳಗಡೆ ಬೂಮಿಗೆ ಇಂದಿನ ಮಾರುಕಟ್ಟೆ ಬೆಲೆ ಆದಾರದ ಮೆಲೆ ಪರಿಹಾರ ನೀಡಬೆಕು ಎಂದು ಒತ್ತಾಯಿಸಿದ್ದಲ್ಲದೆ. ಪ್ರತಿ ಎಕರೆ ಒಣಬೆಸಾಯ ಜಮಿನಿಗೆ 30 ಲಕ್ಷ,ಹಾಗೂ ನೀರಾವರಿ ಜಮಿನುಗಳಿಗೆ 40 ಲಕ್ಷ ರೂ.ಪರಿಹಾರ ನೀಡಬೆಕು.ಇಲ್ಲವಾದಲ್ಲಿ ಸರ್ಕಾರದ ವಿರುದ್ದ ಉಗ್ರಹೋರಾಟ ಮಾಡುವ ಎಚ್ಚರಿಕೆ ನೀಡಿದ್ರು ಸಂತ್ರಸ್ತರು..