ಆರೋಗ್ಯ ವಿಮೆಯನ್ನು ಪಡೆಯಲು ಕರೆ

234

ಬಳ್ಳಾರಿ /ಹೊಸಪೇಟೆ:ಸಹಕಾರ ಸಂಘಗಳ ಸದಸ್ಯರು ಯಶಸ್ವಿನಿ ಯೋಜನೆಯಡಿಯಲ್ಲಿ ಆರೋಗ್ಯವಿಮೆಯನ್ನು ಪಡೆದುಕೊಳ್ಳುವಂತೆ ಯಶಸ್ವಿ ಯೋಜನೆಯ ಅಧಿಕಾರಿ ಕೃಷ್ಣನಾಯ್ಕ್ ಹೇಳಿದರು.
ಗುರುವಾರ ಚಿತ್ತವಾಡ್ಗಿಯ ಪ್ರಾಥಮಿಕ ಕೃಷಿ ಪತ್ತಿನ ಸಂಘದ (ನಂ-2)ದಲ್ಲಿ  ಯಶಸ್ವಿನಿ ನೊಂದಾವಣಿ ಹಾಗೂ ನವೀಕರಣ ಅಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು  ತಾಲೂಕಿನ ಎಲ್ಲಾ ಸೋಸೈಟಿಗಳಲ್ಲಿ ಹಾಗೂ ಸಹಕಾರಿ ಸಂಘಗಲ್ಲಿ ಸದಸ್ಯತ್ವ ಹೊಂದಿದ ರೈತರು ಹಾಗೂ ನಾಗರಿಕರು ಯಶಸ್ವಿನಿ ನೊಂದಾವಣಿಯನ್ನು ಮಾಡಿಕೊಂಡು ಆರೋಗ್ಯವಿಮೆಯನ್ನು ಪಡೆದುಕೊಳ್ಳಬೇಕಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರು ಒಬ್ಬರಿಗೆ 50 ರೂ.ಗಳಂತೆ ಪಾವತಿಸಿ ಯಶಸ್ವಿನಿ ನೊಂದಾವಣಿ  ಮಾಡಕೊಳ್ಳಬೇಕು, ಇತರರು ಒಬ್ಬರಿಗೆ 300ರೂ.ಗಳಂತೆ ಹಣ ಪಾವತಿ ಮಾಡಿ ಯಶಸ್ವಿನಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬೆಕಾಗಿದೆ ಎಂದ ಅವರು ಸಮೀಪದ ಸೋಸೈಟಿಗಳಲ್ಲಿ ಸದಸ್ಯರಾಗಿ ಯಶಸ್ವಿನಿ ನೊಂದಾವಣಿ ಮಾಡಿಕೊಂಡರೆ, ಅಪಘಾತ ವಿಮೆ ಸೇರಿದಂತೆ ಇತರ ಕಾಯಿಲೆಗಳಿಗೆ 2 ಲಕ್ಷ ವರೆಗೂ ವಿಮೆಯನ್ನು ಪಡೆಯಬಹುದಾಗಿದೆ ಎಂದರು.
ಅಧ್ಯಕ್ಷ ಜೆ. ಸಂದೀಪ್  ಮಾತನಾಡಿ ನಮ್ಮ ಸಹಕಾರ ಸಂಘಕ್ಕೆ ಸರ್ಕಾರವು 3500 ಸದಸ್ಯತ್ವವನ್ನು ಪಡೆಯಲು ಗುರಿ ನಿಗದಿ ಮಾಡಿದೆ ಈಗಾಗಲೇ 550 ಸದಸ್ಯತ್ವವನ್ನು ನೀಡಲಾಗಿದೆ. ಇನ್ನು 300 ಸಾವಿರ ಸದಸ್ಯತ್ವವನ್ನು ಮಾಡುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ವಿಮೆ ಪಡೆದವರು ಪುನಃ ನವೀಕರಣ ಮಾಡಿಕೊಳ್ಳಬಹುದಾಗಿದೆ ಎಂದರು.
ಸಣ್ಣಕ್ಕಿ ರುದ್ರಪ್ಪ, ಹೊಸೂರಿನ ಕಿಚಿಡಿಲಕ್ಷ್ಮಣ,ಗುಜ್ಜಲ್ ಶ್ರೀನಿವಾಸ್, ಎಂ.ಕೆ. ಹನುಮಂತಪ್ಪ, ನಾಣಕೇರಿ ಯುವರಾಜ್, ಎನ್. ಮಂಜುನಾಥ,ಎಂ. ಮಂಜುನಾಥ,ಮಾರುತಿ,ಗುಂಡಿ ಪ್ರಶಾಂತ್, ಮಾರ್ಕಂಡೆಯ್ಯ, ಸೇರಿದಂತೆ ಇತರ ರೈತ ಮುಖಂಡು  ಇದ್ದರು.
ಇದೇ ಸಂದರ್ಭದಲ್ಲಿ ಸದಸ್ಯತ್ವ ಪಡೆದ ಸದಸ್ಯರಿಗೆ ಯೋಜನೆಯ ವಿಮೆಯ ಗುರುತಿನ ಚೀಟಿಯನ್ನು ನೀಡಲಾಯಿತು.
ಗುರುವಾರ ಚಿತ್ತವಾಡ್ಗಿಯ ಪ್ರಾಥಮಿಕ ಕೃಷಿ ಪತ್ತಿನ ಸಂಘದ (ನಂ-2)ದಲ್ಲಿ  ಯಶಸ್ವಿನಿ ನೊಂದಾವಣಿ ಹಾಗೂ ನವೀಕರಣ ಅಂದೋಲನ ಕಾರ್ಯಕ್ರಮದಲ್ಲಿ ಯಶಸ್ವಿ ಯೋಜನೆಯ ಅಧಿಕಾರಿ ಕೃಷ್ಣನಾಯ್ಕ್ ಅವರು ಸದಸ್ಯರಿಗೆ ಯಶಸ್ವಿನಿ ಗುರುತಿನ ಚೀಟಿಯನ್ನು  ವಿತರಿಸಿದರು.