ಪವರ್ ಲಿಫ್ಟಿಂಗ್ ನಲ್ಲಿ-ಬಲಿಷ್ಠ ವ್ಯಕ್ತಿ ಪ್ರಶಸ್ತಿ

293

ಬಳ್ಳಾರಿ /ಹೊಸಪೇಟೆ:ಇತ್ತೀಚಿಗೆ ದಾವಣಗೆರೆಯಲ್ಲಿ ಜರುಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸ್ಥಳೀಯ ಪೊಲೀಸ್ ಇಲಾಖೆಯ ಅರುಣ್ ಕುಮಾರ್ ಬಲಿಷ್ಠ ವ್ಯಕ್ತಿ ಪ್ರಶಸ್ತಿ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಸಂಸ್ಥೆ ಹಾಗೂ ಶ್ರೀಸಾಯಿ ಜಿಮ್ನಾಷಿಯಂ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಹಾಗೂ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಅರುಣ್ ಕುಮಾರ್, 90 ಕೆ.ಜಿ.ವಿಭಾಗದಲ್ಲಿ ಬಂಗಾರದ ಪದಕ ಹಾಗೂ ಕರ್ನಾಟಕ ಬಲಿಷ್ಠ ವ್ಯಕ್ತಿ ಪ್ರಶಸ್ತಿ ಪಡೆದಿದ್ದಾರೆ.
ಅದೇ ರೀತಿ ಸೀನಿಯರ್ ವಿಭಾಗದ, 67.5 ಕೆ.ಜಿ.ವಿಭಾಗದಲ್ಲಿ ವಲಿಭಾಷ ಬಂಗಾರದ ಪದಕ ಹಾಗೂ ಬಲಿಷ್ಠ ವ್ಯಕ್ತಿ ಪ್ರಶಸ್ತಿ ಪಡೆದಿದ್ದಾರೆ.