ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳು ದ್ವಂಸ…

343

ಬೆಂಗಳೂರು/ಕೆ ಆರ್ ಪುರ: ರಸ್ತೆ ಒತ್ತುವರಿ ಮಾಡಿಕೊಂಡು ಆಕ್ರಮವಾಗಿ ನಿರ್ಮಸಿದ್ದ ಕೈಗಾರಿಕಾ ಕಟ್ಟಡಗಳನ್ನು ಮಹದೇವಪುರ ವಲಯ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕ್ಷೇತ್ರದ ದೇವಸಂದ್ರ ವಾರ್ಡಿನ ಬಿ ನಾರಾಯಣಪುರದ ಕಾಮದೇನು ಬಡಾವಣೆಯಲ್ಲಿ 30 ಅಡಿ ಅಗಲ, 90 ಅಡಿ ಉದ್ದಾ ಹಾಗೂ ರಾಮಕೃಷ್ಣ ಬಡಾವಣೆಯಲ್ಲಿ  30 ಅಡಿ ಉದ್ದ, 30 ಅಡಿ ಅಗಲ ರಸ್ತೆ ಜಾಗವನ್ನು ಸ್ಥಳೀಯ ನಿವಾಸಿ ನಾಗೇಶ್ವರರಾವ್ ಎಂಬುವವರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕೈಗಾರಿಕಾ ಕಟ್ಟಡಗಳನ್ನು ನಿರ್ಮಿಸಿದರು. ಶನಿವಾರ ಸಾರ್ವಜನಿಕರ ದೂರಿನ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದು  ಸುಮಾರು 2.30ಕೋಟಿ ಎಂದು ಅಂದಾಜಿಸಲಾಗಿದೆ.
ಬಿ.ನಾರಾಯಣಪುರದ ನಾಗೇಶ್ವರರಾವ್ ಎಂಬುವವರು ಸುಮಾರು ಐದಾರು ವರ್ಷಗಳ ಹಿಂದೆ ಕಾಮದೇನು ಹಾಗೂ ರಾಮಕೃಷ್ಣ ಬಡಾವಣೆಯಲ್ಲಿ ರಸ್ತೆ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ಖಾಸಗಿ ಕೈಗಾರಿಕಾ ಕಟ್ಟಡಗಳನ್ನು ನಿರ್ಮಿಸಿದರು. ಸಾರ್ವಜನಿಕರ ದೂರಿನ ಮೇರೆಗೆ ಈ ಸಂಭಂಧ  ಮಹದೇವಪುರ ವಲಯ ಜಂಟಿ ಅಯುಕ್ತೆ ವಾಸಂತಿ ಅಮರ್ ಮತ್ತು ಪಾಲಿಕೆ ಸದಸ್ಯ ಎಂ.ಎನ್. ಶ್ರೀಕಾಂತ್ ನೇತೃತ್ವದಲ್ಲಿ ಪರಿಶೀಲಿಸಿ ಸಾರ್ವಜನಿಕರ ಅಹವಾಲಿನ ಮೇರೆಗೆ  ಒತ್ತುವರಿಯಾಗಿದ ರಸ್ತೆಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಈ ತೆರವು ಕಾರ್ಯಚರಣೆ ವೇಳೆ ಬಿಬಿಎಂಪಿ ಸದಸ್ಯ ಶ್ರೀಕಾಂತ್ಗೌಡ, ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರು ಪರಮೇಶ್ವರ್ಗೌಡ, ಸಹಾಯಕ ಇಂಜಿನಿಯರ್ ನವೀನ್ ಮತ್ತಿತ್ತರು ಇದ್ದರು.