ಸಹಕಾರದ ಬೆಳವಣಿಗೆಗೆ ಸಾಹಿತ್ಯ ಅಗತ್ಯ

253

ಬಳ್ಳಾರಿ /ಬಳ್ಳಾರಿಯಲ್ಲಿ ಕೃಷಿ ಮತ್ತು ಸಹಕಾರ ಸಾಹಿತ್ಯ ಸಮಾವೇಶ-ರಾಘವ ಕಲಾಮಂದಿರದಲ್ಲಿ ಆಯೋಜಿಸಿದ ಸಮಾವೇಶ-ಕಸಾಪ ಮತ್ತು ಕ.ರಾ.ಸಹಕಾರ ಮಹಾಮಂಡಳಿ ಸಹಯೋಗದಲ್ಲಿ ಹಮ್ಮಿಕೊಂಡ ಸಮಾವೇಶ-ಸಹಕಾರದ ಬೆಳವಣಿಗೆಗೆ ಸಾಹಿತ್ಯ ಅಗತ್ಯ-ಡಾ.ಶೇಖರಗೌಡ ಮಾಲಿಪಾಟೀಲ್ ಹೇಳಿಕೆ

ಸಾಹಿತ್ಯ ದ ಅರಿವು ಹೊಂದುವ ಮೂಲಕ ಸಹಕಾರಿ ಕ್ಣೇತ್ರದಲ್ಲಿನ ಉಪಯೋಗಹಳನ್ನು ಕೃಷಿಕರು ಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಡಾ.ಶೇಖರಗೌಡ ಮಾಲಿ ಪಾಟೀಲ್ ತಿಳಿಸಿದ್ದಾರೆ.
ಅವರು ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಸಹಯೋಹದಲ್ಲಿ ಹಮ್ಮಿಕೊಂಡಿದ್ದ ಕೃಷಿ ಮತ್ತು ಸಹಕಾರ ಸಾಹಿತ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ರು.
ರೈತರಿಗೆ ಸಾಕಷ್ಟು ಸಮಸ್ಯೆ ಗಳಿವೆ. ಅವರ ಸಮಸ್ಯೆಗಳು ನಾಡಿನ ಜನತೆಗೆ ತಿಳಿಯಬೇಕು, ಸರ್ಕಾರಗಳು ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನುಕೂಲ ಕಲ್ಪಿಸಿಕೊಡಲು ಈ ಸಮಾವೇಶ ಪೂರಕವಾಗಿರಲಿ ಎಂದು ಆಶಿಸಿದರು.
ಮಾಜಿ ಶಾಸಕ ಚಂದ್ರಶೇಖರಯ್ಯ ಸ್ವಾಮಿ, ಕಸಾಪ ಅಧ್ಯಕ್ಷ ಸಿದ್ಧರಾಮ‌ ಕಲ್ಮಠ ಇನ್ನಿತರರು ಇದ್ರು.
ಇದೇವೇಳೆ ರೈತ ಹೋರಾಟಗಾರ ಹನುಮಗೌಡ ಬೆಳಗುರ್ಕಿ ಇವರು ನೀರು ಸಂರಕ್ಷಣೆ ಮತ್ತು ನಿರ್ವಹಣೆ ವಿಷಯವಾಗಿ ಮಾತನಾಡಿದ್ರು. ಹಗರಿ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ.ಮಹಮ್ಮದ್ ಇಬ್ರಾಹಿಂ ಅವರು ಭತ್ತದ ಕೃಷಿ ಮತ್ತು ಬಳಕೆಯಲ್ಲಿನ ಸತ್ಯ ಮಿಥ್ಯಗಳು ಕುರಿತು, ಕಾರ್ಮಿಕ ಧುರೀಣ ಸಿದ್ಧನಗೌಡ ಪಾಟೀಲ್ ಅವರು ಕಾರ್ಪೋರೇಟ್ ಕೃಷಿ ಕುರಿತು, ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕ ಬಿ.ವಿ.ಮಹಾದೇವಪ್ಪ ಅವರು ಸಹಕಾರ ಚಳುವಳಿಯ ಪ್ರಸ್ತುತೆ ಕುರಿತು ಮತ್ತು ಸಾಹಿತಿ ಹನುಮಾಕ್ಷಿ ಗೋಗಿ ಅವರು ಸಹಕಾರಿ ಕಾನೂನುಗಳು ಕುರಿತು ಮಾತನಾಡಿದ್ರು.