ಮಾದಪ್ಪನ ಭಕ್ತರಿಗೆ ತೊಂದರೆ..

358

ಮಹದೇಶ್ವರನ ಭಕ್ತರಿಗೆ ತೊಂದರೆ,  ಇಬ್ಬರು ಶಾಸಕರುಗಳ ಅವಿವೇಕಿ ತನದಿಂದಾಗಿ ಮಾದಪ್ಪನ ಭಕ್ತರು ಪರದಾಟ. ಹಾಲಿ ಶಾಸಕ ಜಯಣ್ಣ, ನರೇಂದ್ರ ಬೇಜವಾಬ್ದಾರಿ ತನಕ್ಕೆ ಮಾಜಿ ಶಾಸಕಿ ಪರಿಮಳಾ, ನಂಜುಂಡಸ್ವಾಮಿ ಕಿಡಿ, ತರಾಟೆ  

ಚಾಮರಾಜನಗರ/ಕೊಳ್ಳೇಗಾಲ:ಮಲೈಮಹದೇಶ್ವರ ಬೆಟ್ಟಕ್ಕೆ ತೆರಳುವ ಸಾವಿರಾರು ಭಕ್ತರಿಗೆ ಅನಾನುಕೂಲ ಕಲ್ಪಿಸಿ ವೈಪಲ್ಯ ಮೆರೆದ ಸಕಾ೯ರದ ಕ್ರಮದ ವಿರುದ್ದ ಹಾಗೂ ಇಬ್ಬರು ಶಾಸಕರುಗಳ ವಿರುದ್ದ ಬಿಜೆಪಿ ಕಾಯ೯ಕತ೯ರು
ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ದಿಕ್ಕಾರದ ಘೋಷಣೆಗಳನ್ನು ಕೂಗಿ ಕೆಲಕಾಲ ಪ್ರತಿಭಟಿಸಿದರಲ್ಲದೆ  ಪೊಲೀಸ್ ವೈಪಲ್ಯದ ವಿರುದ್ದವೂ ಕಿಡಿಕಾರಿದರು.
ಬಸ್ ನಿಲ್ದಾಣದಲ್ಲಿ ಬೆಳಗಿನಿಂದ ಬೆಟ್ಟಕ್ಕೆ ತೆರಳಲು ಸಾವಿರಾರು ಭಕ್ತರು ಕಿಕ್ಕಿರಿದು ಜಮಾಯಿಸಿದ್ದರು, ಆದರೆ ಸಮಪ೯ಕ ಬಸ್  ಇಲ್ಲದ ಕಾರಣ ಆಗಮಿಸುವ ಬಸ್ ಗೆ ಹತ್ತಲು ನೂರು ನುಗ್ಗಲು
ಉಂಟಾಗುತ್ತಿತ್ತು, ಬಸ್ ನಿಲ್ದಾಣದಲ್ಲಿ ಭಕ್ತಾಧಿಗಳ ದಂಡೆ ಕಾದು ಬಸವಳಿಯುತ್ತಿದ್ದ ಪರಿಸ್ಥಿತಿ ಮನಗಂಡು ಮಾಜಿ ಶಾಸಕರುಗಳಾದ ಜಿ.ಎನ್.ನಂಜುಂಡಸ್ವಾಮಿ,
ಪರಿಮಳಾ ನಾಗಪ್ಪ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಇನ್ನಿತರ ಬಿಜೆಪಿ ನಾಯಕರು ಬೇಟಿ ನೀಡಿ ಭಕ್ತಾಧಿಗಳ ಪರಿಸ್ಥಿತಿ ಮನಗಂಡು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ
ಕಿಡಿಕಾರಿದರಲ್ಲದೆ  ಈ ವ್ಯವಸ್ಥೆ ವಿರುದ್ದ ಬಿಜೆಪಿ ಕಾಯ೯ಕತ೯ರು ದಿಕ್ಕಾರದ ಘೋಷಣೆ ಕೂಗಿದರು.
ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸದೆ ನಿಲ೯ಕ್ಷ್ಯ ಪ್ರದಶಿ೯ಲಿದ ಡಿಪೋ ವ್ಯವಸ್ಥಾಪಕರನ್ನು ಇದೇ ಸಂದಭ೯ದಲ್ಲಿ ತರಾಟೆ ತೆಗೆದುಕೊಳ್ಳಲಾಯಿತು.
ಅಲ್ಲದೆ ಬಸ್ ನಿಲ್ದಾಣದಲ್ಲಿ ಸಮಪ೯ಕ ರೀತಿಯಲ್ಲಿ ಭಕ್ತಾಧಿಗಳ ರಕ್ಷಣೆಗೆ ಪೊಲೀಸ್ ನಿಯೋಜಿಸದಿರುವ ಬಗ್ಗೆಯೂ ಮಾಜಿ ಶಾಸಕ ನಂಜುಂಡಸ್ವಾಮಿ
ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯ ಯಾತ್ರಿಕರಿದ್ದಾರೆ, ಆದರೆ ಅವರಿಗೆ
ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಹೆಚ್ಚುವರಿ ಬಸ್ ಸೌಲಭ್ಯ ಇಲ್ಲ, ಮ.ಬೆಟ್ಟಕ್ಕೆ ಕೋಟ್ಯಾಂತರ ಆದಾಯ ಬರುತ್ತೆ, ಆದರೆ ಇಬ್ಬರು ಶಾಸಕರು ಬೇಜವಾಬ್ದಾರಿ ಮೆರೆದು
ಭಕ್ತಾಧಿಗಳಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ, ಇಂದು ಭಕ್ತರಿಗಾದ ತೊಂದರೆ ಶಾಸಕ ಜಯಣ್ಣ, ನರೇಂದ್ರ ಅವರೆ ಹೊಣೆ ಎಂದು ಕಿಡಿಕಾರಿದರು.
ಇಂದು ಸಾವಿರಾರು ಜನ  ನಿಲ್ದಾಣದಲ್ಲಿದ್ದಾರೆ ಆದರೆ ಒಬ್ಬ ಪೊಲೀಸ್ ಪೇದೆ ಇಲ್ಲ ಎಂದರೆ ಇಲಾಖೆಯ ಅಧಿಕಾರಿಗಳು ಎಷ್ಟರ ಮಟ್ಟಿಗಿದ್ದಾರೆ ಎಂಬುದು
ವೇದ್ಯವಾಗಲಿದೆ. ಲಕ್ಷಾಂತರ ಭಕ್ತಾಧಿಗಳಿಗೆ ಡಿಪೋ ಕೇವಲ ನೂರು ಬಸ್ ಬಿಟ್ಟಿದೆ ಇದು ನಮ್ಮ ವ್ಯವಸ್ಥೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಸೂಕ್ತ ರೀತಿಯಲ್ಲಿ
ಸಭೆ ಕರೆದು ಕ್ರಮಕೈಗೊಂಡು ಜವಾಬ್ದಾರಿ ಮೆರೆಯಬೇಕಾದ ಇಬ್ಬರು ಶಾಸಕರುಗಳ ಅವಿವೇಕಿ ತನದಿಂದ ಇಂದು ಜನತೆ  ತೊದರೆ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದರು.
ಸಮಪ೯ಕ ರೀತಿಯಲ್ಲಿ ಸಭೆ ನಡೆಸಿದ್ದರೆ ಈಗಾಗುತ್ತಿರಲಿಲ್ಲ ಎಂದರಲ್ಲದೆ ಇಲ್ಲಿ ದೂಳಿನ ಸಿಂಚನ ಹೆಚ್ಚಿನ ರೀತಿಯಲ್ಲಿ ಆಗುತ್ತಿದ್ದರೂ ಸಹಾ ನೀರು ಸಿಂಪಡಿಸಿ ಕ್ರಮಕೈಗೊಳ್ಳುವಲ್ಲಿ
ಸಂಬಂಧಪಟ್ಟವರು ಲೋಪ ಎಸಗಿದ್ದಾರೆ ಎಂದು ದೂರಿದರು.
ಭಕ್ತರಿಗೆ ಆದ ತೊಂದರೆಗೆ ಇಬ್ಬರು ಶಾಸಕರೇ ಹೊಣೆ- ಪರಿಮಳ
ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮಾತನಾಡಿ, ಅಮವಾಸ್ಯೆಗೆ ಬೆಟ್ಟಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿ ಆಗಮಿಸುತ್ತದೆ ಎಂಬುದು ಗೊತ್ತಿದ್ದರೂ ಸಹಾ ಸಂಬಂಧಪಟ್ಟ ಶಾಸಕರುಗಳು
ಜವಾಬ್ದಾರಿ ಮರೆತಿದ್ದಾರೆ, ಆದ್ದರಿಂದಲೇ ಭಕ್ತಾಧಿಗಳು ತೊಂದರೆ ಅನುಭವಿಸುವಂತಾಗಿದೆ. ಇಂದಿನ ಭಕ್ತರ ತೊಂದರೆಗೆ  ಹನೂರು ಹಾಗೂ ಕೊಳ್ಳೇಗಾಲ
ಕ್ಷೇತ್ರದ ಇಬ್ಬರು ಶಾಸಕರುಗಳೇ ಹೊಣೆ ಎಂದು ಆರೋಪಿಸಿದರು.
ಈಸಂದಬ೯ದಲ್ಲಿ  ಡಾ.ದತ್ತೇಶ್,  ತಾಪಂ ಸದಸ್ಯ ಕೖಷ್ಣ್ಪ, ಬಿಜೆಪಿ ಮುಖಂಡರುಗಳಾದ ಮಹದೇವಪ್ಪ, ವೀರೂಪಾಕ್ಷ, ಚೇತನ್, ಶಿವಕುಮಾರ್,
ನಟರಾಜಗೌಡ,  ಮಧುಚಂದ್ರ ಇನ್ನಿತರರು ಇದ್ದರು.