ದರ್ಶನಕ್ಕೆ ಉಚಿತ ಪ್ರವೇಶ…

429

ಬಳ್ಳಾರಿ/ಹೊಸಪೇಟೆ:ಐತಿಹಾಸಿಕ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನಕ್ಕಾಗಿ ಬರುವ ಭಕ್ತರು ಇನ್ಮುಂದೆ ಪ್ರವೇಶ ಶುಲ್ಕವನ್ನು ನೀಡಬೇಕಿಲ್ಲ. ತನ್ನ ದರ್ಶನ ಬರುವ ಭಕ್ತರಿಗೆ ವಿರೂಪಾಕ್ಷ  ಉಚಿತ ದರ್ಶನ ಭಾಗ್ಯ ಕರುಣಿಸಿದ್ದಾನೆ.

ಹೌದು! ಹಿಂದೂ ಧಾರ್ಮಿಕ ದತ್ತಿ ಇಲಾಖೆ ಇತ್ತೊಂದು ಆದೇಶ ಹೊರಡಿಸಿದ್ದು, ಜು.24ರಿಂದ ಜಾರಿಗೆ ಬರಲಿದೆ. ಈ ಹಿಂದೆ ವಿರೂಪಾಕ್ಷೇಶ್ವರ ಸ್ವಾಮಿ ದರ್ಶನಕ್ಕಾಗಿ ಬರುವ ಭಕ್ತರೊಬ್ಬರಿಗೆ 2.ರೂ. ಪ್ರವೇಶ ಶುಲ್ಕ ಪಡೆಯಲಾಗುತ್ತಿತ್ತು. ಈ ಶುಲ್ಕವನ್ನು ಹಿಂಪಡೆದು ಭಕ್ತರಿಗೆ ಉಚಿತ ದರ್ಶನ ನೀಡಲು ಇಲಾಖೆ ಮುಂದಾಗಿದೆ.

ಅಲ್ಲದೆ, ಸೇವಾ ಧರಗಳನ್ನು ಪರಿಷ್ಕರಿಸಲಾಗಿದ್ದು, ನೂತನ ದರ ಪಟ್ಟಿ ಹೀಗಿದೆ. ತೆಂಗಿನ ಕಾಯಿ 2 ರೂ., ಮಂಗಳಾರತಿ 5 ರೂ.,ಕುಂಕಮಾರ್ಚನೆ 30 ರೂ., ಸಹಸ್ರನಾರ್ಚನೆ 50 ರೂ., ರುದ್ರಾಭಿಷೇಕ 150 ರೂ., ಪಂಚಾಮೃತ ಅಭಿಷೇಕ, ತ್ರಿಕಲಾಭಿಷೇಕ/ಮಹನ್ಯಾಸ 300 ರೂ., ಎಲೆ ಪೂಜೆ 100 ರೂ., ಕ್ಷೀರಾಭಿಷೇಕ 150 ರೂ., ಲಘು ರುದ್ರಾಭಿಷೇಕ 2000 ರೂ., ನವಗ್ರಹ ಪೂಜೆ 200., ಏಕಕಾಲ ನೈವೆದ್ಯ 125 ರೂ., ಜಾವಳ 150 ರೂ.,ಮದುವೆ 750 ರೂ., ಒಂದು ದಿನದ ಸರ್ವ ಸೇವೆ 1000 ರೂ., ತೊಟ್ಟಿಲ್ ಸೇವೆ 150 ರೂ., ಪ್ರಕಾರೋತ್ಸವ 1000 ರೂ., ಕಲ್ಯಾಣೋತ್ಸವ 1250 ರೂ., ರಜತ ನಂದಿ ಉತ್ಸವ 3000 ರೂ., ವಂಶಪಾರಂಪರ್ಯ ಮಂಗಳಾರತಿ 1500 ರೂ., ವಂಶಪಾರಂಪರ್ಯ ಅಭಿಷೇಕ 3000 ರೂ., ದ್ವಿಚಕ್ರ ವಾಹನ ಪೂಜೆ 50 ರೂ., ಜೀಪು, ಕಾರು ಟ್ರ್ಯಾಕ್ಟರ್ ಪೂಜೆ 150 ರೂ., ಬಸ್, ಲಾರಿ ಪೂಜೆ 200 ರೂ., ಒಂದು ವಾರದ ನಂದಾದೀಪ 250 ರೂ., ಒಂದು ತಿಂಗಳ ನಂದಾದೀಪ 600 ರೂ., ಒಂದು ವರ್ಷದ ನಂದಾದೀಪ 2500 ರೂ., ಕ್ಯಾಮರಾ ದರ 50 ರೂ., ಕಾಯಿ ಪ್ರಸಾದ 50 ರೂ ಹಾಗೂ ವಿಶೇಷ ದರ್ಶನ 25 ರೂ. ನಿಗಧಿ ಮಾಡಲಾಗಿದೆ. ಹಂಪಿಯ ತುಂಗಭದ್ರಾ ನಧಿ ತಟದಲ್ಲಿರುವ ಪುರಾತನ ಯಂತ್ರೋದ್ಧಾರಕ ಆಜನೇಯ ದೇಗುಲಕ್ಕೆ ಆಂಧ್ರಪ್ರದೇಶದ ಒಂಗೊಲ್ ಮೂಲದ ಭಕ್ತರಾದ ಮಲ್ಲಾದಿ ವಿಜಯಲಕ್ಷ್ಮೀ, ಪತಿ ದಿ.ನಾಗೇಶ್ವರರಾವ್ 1.604 ಕೆಜಿ. ತೂಕದ ಬೆಳ್ಳಿಯ ತಟ್ಟೆ ಹಾಗೂ ತಂಬಿಗೆಯನ್ನು ಕಾಣಿಕೆಯಾಗಿ ಸಲ್ಲಿಸಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶ ರಾವ್ ತಿಳಿಸಿದ್ದಾರೆ.