ಹುಲಿ ದಾಳಿ,ವ್ಯಕ್ತಿಗೆ ಗಂಭೀರ ಗಾಯ..

263

ಚಾಮರಾಜನಗರ/ಕೊಳ್ಳೇಗಾಲ ತಾಲ್ಲೂಕಿನ ಅರೇಪಾಳ್ಯ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹುಲಿ ಧಾಳಿ ನಡೆದಿದೆ. ಅದೇ ಗ್ರಾಮದ ರೇವಣ್ಣೇಗೌಡ(55) ಹುಲಿ ಧಾಳಿಗೊಳಗಾದವರು. ಇವರು ಗ್ರಾಮದಲ್ಲಿರುವ ಕುಡಿಯುವ ನೀರಿನ ತೊಟ್ಟಿಯ ಬಳಿ ಕುಳಿತಿದ್ದ ವೇಳೆ ಹುಲಿ ಧಾಳಿವೆಸಗಿದೆ. ಕೈ ಕಾಲುಗಳು ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಇವರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇರುವ ಕಾರಣ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಕಳುಹಿಸಲಾಗಿದೆ.