ಪಾಂಡುರಂಗ ಮಂದಿರದ ಭಗವಾನ್ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ

388

ಬಳ್ಳಾರಿ :ನಗರದಲ್ಲಿ ನೂತನ ಶ್ರೀ ಪಾಂಡುರಂಗ ಮಂದಿರ ನಿರ್ಮಾಣ-ಮುಂಡ್ಲೂರು ರಾಜೇಶ್ವರಿ ನಗರದಲ್ಲಿ ವಿಠ್ಠಲ ಮಂದಿರ ನಿರ್ಮಾಣ-ಪಂಢರಪುರದ ಸದ್ಗುರು ಶರದ್ ಸ್ವಾಮಿ ಲಾಖೆ, ಮಾತೋಶ್ರೀ ಅನುರಾಧಾ ಶರದ್ ಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ಆರಂಭ-ಸಂತ ಜ್ಞಾನೇಶ್ವರಿ ಪಾರಾಯಣಕ್ಕೆ ಚಾಲನೆ

ಬಳ್ಳಾರಿಯ 31ನೇ ವಾರ್ಡಿನಲ್ಲಿ ಹೊಸದಾಗಿ ಶ್ರೀ ಪಾಂಡುರಂಗ ಮಂದಿರ ನಿರ್ಮಾಣವಾಗಿದೆ. ಜುಲೈ 27 ರಂದು ಬೆಳಿಗ್ಗೆ ಶ್ರೀ ಹರಿವಾಯು ಗುರುಗಳ ಅನುಗ್ರಹದಿಂದ ಭಗವಾನ್ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಡೆಯಲಿದೆ. ತನ್ನಿಮಿತ್ತ ಇಂದು ಸಂತ‌ಜ್ಞಾನೇಶ್ವರ ಮಹಾರಾಜರ ಪೋತಿ ಸ್ಥಾಪನೆ ಹಾಗೂ ಗ್ರಂಥ ರಾಜಪಾರಾಯಣಕ್ಕೆ ಚಾಲನೆ ನೀಡಲಾಯಿತು.

ಎಂ.ರಾಜೇಶ್ವರಿ ನಗರದ ಶ್ರೀ ವಿಠ್ಠಲ ಮಂದಿರದಲ್ಲಿ ಶ್ರೀ ವಿಠ್ಠಲ ಗೋಂಧಳಿ ಸಮಾಜದ ವತಿಯಿಂದ ಹಮ್ಮಿಕೊಂಡ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯದ ನಾನಾ ಭಾಗಗಳಿಂದ ಸಂತರು, ಭಕ್ತರು ಆಗಮಿಸಿದ್ದಾರೆ.

ಏಳು ದಿನಗಳ ಕಾಲ ನಡೆಯುವ ಈ ಅಖಂಡ ಹರಿನಾಮ‌ ಸಪ್ತಾಹದಲ್ಲಿ ದಾವಣಗೆರೆಯ ಹೆಚ್.ನರಸಿಂಗರಾವ್, ಲಕ್ಷ್ಮೇಶ್ವರದ ಜ್ಞಾನು ಬಾ ಭಿಸೆ, ನಾರಾಯಣ ಭಿಸೆ, ಸತಾರಾದ ಕೆ.ಸಿ.ರಾಮಚಂದ್ರ ಶಾಸ್ತ್ರಿ, ಹುಳ್ಳೂರಿನ ಬಸವರಾಜ, ಮುಚ್ವಿಕೂರಿನ ಸತೀಶ್ ವೆಂ., ಚಿಲಮುರದ ವಿಠಲ ರೊಟಿ ಮತ್ತು ಸದ್ಗುರು ಶರದ್ ಸ್ವಾಮಿ ಲಾಖೆ ಇವರು ಪ್ರತಿದಿನ ಕಾಕಡಾರತಿ, ಪಾರಾಯಣ, ಗಾಥಾ ಭಜನೆ, ಹರಿನಾಮ ಪ್ರವಚನ ನಾಮಜಪ, ಹರಿಪಾಠ, ಕೀರ್ತನೆ, ಸಂಗೀತ ಕಾರ್ಯಕ್ರಮ‌ ನಡೆಸಿಕೊಡಲಿದ್ದಾರೆ.

ಗೋಂಧಳಿ ಸಮಾಜದ ಅಧ್ಯಕ್ಷ ಡಾ.ಎಸ್.ಎನ್. ಶಾಸ್ತ್ರಿ ಅವರ ಸಂಕಲ್ಪದಂತೆ ಆಯೋಜಿಸಿರುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ವಿಹೆಚ್ ಲಕ್ಷ್ಮಣ್ ನಾಯಕ್, ಎಸ್.ಬಿ.ಗಿಡ್ಡಪ್ಪ, ಎಸ್.ವಿ.ಶಾಸ್ತ್ರಿ, ವಿ.ನಲ್ಲಾರೆಡ್ಡಿ, ಮುರಹರಿ ಶಿಂಧೆ, ರಾಘವೇಂದ್ರ ವಾಕೋಡೆ, ಪಾಂಡುರಂಗ ವಾಕೋಡೆ, ಗಜೇಂದ್ರ ಜೋಷಿ, ಎಸ್.ನರಸಿಂಹ ಸಿಂಧೆ, ನರಸಿಂಹುಲು ವಾಷ್ಟರ್, ಎಸ್.ಚಂದ್ರಶೇಖರ್ ತಳವಾರ ಸಿಂಧೆ, ಭೋರಾತ್ ನಾಗರಾಜು, ಹುಬ್ಬಳ್ಳಿಯ ಉದ್ಯಮಿ ಎಂ.ಬಿ.ಜೋಷಿ ಸೇರಿದಂತೆ ಶ್ರೀ ವಿಠಲ ಗೋಂಧಳಿ ಸಮಾಜದ ಆಸ್ತಿಕರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.