ಅಭಿನಂದನಾ ಸಮಾರಂಭ

276

ಮಂಡ್ಯ/ಮಳವಳ್ಳಿ: ನಾವು ಕಲಿತ ವಿದ್ಯೆಯನ್ನು ಬೇರೆಯವರೆಗೆ ಧಾರೆ ಎರೆಯುವುದು ದೇವರ ಕೆಲಸ ಎಂದು ಮಾಜಿ ಸಚಿವ ಎಸ್.ಎ ರಾಮದಾಸ್ ತಿಳಿಸಿದರು. ಮಳವಳ್ಳಿ ಪಟ್ಟಣದ ಭಗವಾನ್ ಬುದ್ದ ಕಾಲೇಜು ಆವರಣದಲ್ಲಿ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಸ್ವೀಕರಿಸಿ ಮಾತನಾಡಿದ ಅವರು ನಾವು ಕಲಿತ ವಿದ್ಯೆಯನ್ನು ನಮ್ಮಲ್ಲೇ ಉಳಿಸಿಕೊಳ್ಳದೆ ನಮ್ಮ ಮಕ್ಕಳಲ್ಲದೆ ಅಕ್ಕಪಕ್ಕ ಮನೆಯವರೆಗೂ ಹೇಳಿಕೊಡಿ ಇದರಿಂದ ಜ್ಣಾನಾರ್ಜನೆ ಬೆಳೆಯುತ್ತದೆ. ಎಂದರು. ಕಾಯ೯ಕ್ರಮ ದಲ್ಲಿ ಭಗವಾನ್ ಬುದ್ದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯಮದೂರುಸಿದ್ದರಾಜು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಿವಸ್ವಾಮಿ, ಮಂಜುಸ್ವಾಮಿ, ಅಪ್ಪಾಜೀಗೌಡ, ಕುಮಾರಸ್ವಾಮಿ, ಪ್ರಸಾದ್.ಕುಮಾರ್, ಬಸವೇಗೌಡ, ಸೇರಿದಂತೆ ಮತ್ತಿತ್ತರರು ಇದ್ದರು