ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ

187

ಶಿವಮೊಗ್ಗ/ ಗಾಜನೂರು:ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಡಾ.ಲೊಕೇಶ್ ಭೇಟಿ ನೀಡಿದ್ದರು.

ಕಳೆದ ಮೂರು ದಿನಗಳ ಹಿಂದೆ ಕಲುಷಿತ ಆಹಾರವನ್ನು ಸೇವಿಸಿ 20 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದಾಖಲಾಗಿದ್ದರು ಈ ಹಿನ್ನೆಲೆಯಲ್ಲಿ, ವಸತಿ ಶಾಲೆಯ ಅಸ್ವಸ್ಥಗೊಂಡ ಮಕ್ಕಳ ಸಹಪಾಠಿಗಳನ್ನು ವಿಚಾರಿಸಲಾಯಿತು.

ಅಡುಗೆ ತಯಾರು ಮಾಡುವ ಸಿಬ್ಬಂದಿಗಳನ್ನು ವಿಚಾರಿಸಲಾಯಿತು.

ವಸತಿ ಶಾಲೆಯ ಸುತ್ತ ಮುತ್ತಲಿನ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಯಿತು.

ಅಡುಗೆಯವರು ಮತ್ತು ಅಡುಗೆ ಸಹಾಯಕರು ಪ್ರತ್ಯೇಕ ಉಡುಪುಗಳನ್ನು ಧರಿಸಿ ಅಡುಗೆ ತಯಾರು ಮಾಡುವಂತೆ, ಈ ಸಂದರ್ಭದಲ್ಲಿ ತಲೆಗೆ ಡಿಸ್ಪೋಸಬಲ್ ಕ್ಯಾಪ್ ಗಳು, ಗ್ಲೌಸ್ ಗಳು, ಏಫ್ರಾನ್ ಗಳನ್ನು, ಶುಭ್ರವಾದ ಬಿಳಿ ಬಟ್ಟೆಯ ಉಡುಪುಗಳನ್ನು ಧರಿಸಿ ಕರ್ತವ್ಯವನ್ಬು ನಿರ್ವಹಿಸುವಂತೆ ಸೂಚಿಸಲಾಯಿತು.

ಅಡುಗೆ ಮನೆಯಲ್ಲಿ ಕರ್ತವ್ಯವನ್ನು ನಿರ್ವಹಿಸುವವರು ಪ್ರತ್ಯೇಕ ಪಾದರಕ್ಷೆಗಳನ್ನು ಬಳಸಬೇಕು. ಶೌಚಾಲಯ ಬಳಸಿದ ನಂತರ ಕೈ ಕಾಲುಗಳನ್ನು ಶುಭ್ರವಾಗಿ ತೊಳೆದುಕೊಂಡು ಅಡುಗೆ ಮನೆಗೆ ಬರಬೇಕು, ಈ ಬಗ್ಗೆ ಅಡುಗೆಯವರ ಪಾಲಿಸಬೇಕಾದ ಸೂಚನೆಗಳನ್ನು, ಸೂಚನಾ ಫಲಕದಲ್ಲಿ ಹಾಕುವಂತೆ ಪ್ರಾಂಶುಪಾಲರಿಗೆ ತಿಳಿಸಿದರು.

ಈ ಘಟನೆಯ ಬಗ್ಗೆ ಪ್ರಯೋಗಾಲಯದಿಂದ ವರದಿ ಬಂದ ನಂತರ ಮುಂದಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.