ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಬೇಡಿಕೆಗಳ ಆಗ್ರಹಿಸಿ ಪತ್ರಿಭಟನೆ

418

ಬಳ್ಳಾರಿ /ಹೊಸಪೇಟೆ:ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸ್ಥಳೀಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ನೂರಾರು ಕಾರ್ಮಿಕರು, ಶಾಸಕ ಆನಂದ್ ಸಿಂಗ್ ನಿವಾಸ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಶ್ರಮಿಕ ಭವನದಿಂದ ಮೆರವಣಿಗೆ ಮೂಲಕ ಶಾಸಕ ಆನಂದಸಿಂಗ್ ನಿವಾಸದ ಮುಂಭಾಗದಲ್ಲಿ ಜಮಾವಣೆಗೊಂಡ ಕಟ್ಟಡ ಕಾರ್ಮಿಕರು, ಮರಳು ಬೆಲೆ ಏರಿಕೆಯನ್ನು ನಿಯಂತ್ರಿಸುವ ಮೂಲಕ ಇತರೆ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಫೆಡರೇಷನ್ ಜಿಲ್ಲಾಧ್ಯಕ್ಷ ಎನ್. ಯಲ್ಲಾಲಿಂಗ ಮಾತನಾಡಿ, ದೇಶದಲ್ಲಿ ಕೃಷಿಯನ್ನು ಹೊರತುಪಡಿಸಿದರೆ,  ಅತಿ ಹೆಚ್ಚು ಕೆಲಸ ಮಾಡುವುದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿ ಕೆಲಸದಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ ಕಟ್ಟಡ ನಿರ್ಮಾಣದ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ, ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಇದಲ್ಲದೇ ಕಳೆದ ಮೂರು ತಿಂಗಳಿಂದ ತಾಲೂಕಿನಲ್ಲಿ ಮರಳು ನೀತಿ ಜಾರಿಯಾಗದ ಹಿನ್ನಲೆಯಲ್ಲಿ ಮರಳಿನ ಬೆಲೆಯು ಗಗನಕ್ಕೇರಿದ್ದು, ಬಡ ಜನರು ಮನಗಳನ್ನು ನಿರ್ಮಿಸಿಕೊಳ್ಳಲಾಗದಂತ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಟ್ಟಡ ನಿರ್ಮಾಣದ ಕೆಲಸ-ಕಾರ್ಯಗಳು ಸ್ಥಗಿತಗೊಂಡು, ಕಾರ್ಮಿಕರು ಪರದಾಡುವಂತಾಗಿದೆ. ಈ ಕೂಡಲೇ ಕಟ್ಟಡ ಸಾಮಾಗ್ರಿಗಳನ್ನು ಬೆಲೆಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ತಾಲೂಕು ಅಧ್ಯಕ್ಷ ಎಂ.ಗೋಪಾಲ್ ಮಾತನಾಡಿ, ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಇದುವರೆಗೂ 11,20,097ಲಕ್ಷ ಕಾರ್ಮಿಕರು ನೊಂದಾವಣೆಯಾಗಿದ್ದು, ಸೆಸ್ ಮತ್ತು ನೊಂದಣಿ ಮೂಲಕ 565,71 ಕೋಟಿ ಹಣ ಸಂಗ್ರಹವಾಗಿದೆ. ಆದರೆ ಕಳೆದ 11 ವರ್ಷಗಳಲ್ಲಿ ಸೌಲಭ್ಯಗಳಿಗಾಗಿ ಕೇವಲ 177 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಲಾಗಿದೆ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಆರ್.ಭಾಸ್ಕರ್ ರೆಡ್ಡಿ ಮಾತನಾಡಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನಿಯಮ 39 ರಂತೆ ಮತ್ತು ಕರ್ನಾಟಕ ರಾಜ್ಯ ಪತ್ರ. ನಂ. ಎಲ್.ಡಿ. 210 ಎಲ್.ಇ.ಟಿ. 2014 ಅಧಿಸೂಚನೆಯಂತೆ ಪಿಂಚಣಿಗೆ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಹಿಂಬಾಕಿ ಸಮೇತ ಪಿಂಚಣಿ ಮಂಜೂರು ಮಾಡಬೇಕು.

ಸಂಪ್ರದಾಯಕ ಮರಳು ಗಣಿಗಾರಿಕೆಗೆ ಅವಕಾಶ ನೀಡಿ ಕಾರ್ಮಿಕರು ಹಾಗೂ ನಿರ್ಮಾಣ ವಲಯದ ದೃಷ್ಟಿಯಿಂದ ದುಪ್ಪಟ್ಟಾದ ಮರಳಿನ ಬೆಲೆಯನ್ನು ಕೆಳಗಿಳಿಸಿ, ಬಡಜನರಿಗೆ ತಲುಪುವಂತೆ ಮಾಡಬೇಕು ಹಾಗೂ ಕಾಳಸಂತೆ ಕೋರರ ಮೇಲೆ ಕಾನೂನುಕ್ರಮ ಜರುಗಿಸಿ ಜನಪರಮರಳು ನೀತಿ ಜಾರಿಗೊಳಿಸಬೇಕು.ಸಿಮೆಂಟ್, ಕಬ್ಬಿಣ, ಬಣ್ಣ, ಪ್ಲಂಬಿಂಗ್, ಟೈಲ್ಸ್ ಮತ್ತು ಇಟ್ಟಿಗೆ ಬೆಲೆಯನ್ನು ನಿಯಂತ್ರಿಸಬೇಕು. ಭೂಸ್ವಾಧೀನ ಗೊಳಿಸಿ ನಿವೇಶನ ರಹಿತ ಕಟ್ಟಡ ಕಾರ್ಮಿಕರನ್ನು ಗುರುತಿಸಿ ನಿವೇಶನ ಹಂಚಬೇಕು. ಫಲಾನುಭವಿಗಳು ಅರ್ಜಿ ಸಲ್ಲಿಸಿದ 30 ದಿನದ ಒಳಗೆ ಅವರ ಸೌಲಭ್ಯದ ಹಣ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು  ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆಂ ಕರೆದು ಈಡೇರಿಸಬೇಕೆಂದು ಆಗ್ರಹಿಸಿದರು. ಆರ್.ಎಸ್. ಬಸವರಾಜ್, ಹೇಮಂತ್ ನಾಯ್ಕ್, ಶರಣಪ್ಪ,. ರಾಮಾಜಿನಿ,   ಶರಣೊಪೊ, ರಾಮಂಜನಿ, ಹೇಮಂತ ನಾಯ್ಕ್, ಸೇರಿದಂತೆ ನೂರಾರು ಕಟ್ಟಡ  ಕಾರ್ಮಿಕರು ಇದ್ದರು.