ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ…

353

ಬಳ್ಳಾರಿ /ಹೊಸಪೇಟೆ:ನಗರದ ಹರಿಜನ ಕೇರಿಯ ಬಾಪೂಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಬುಧವಾರ ನಡೆಯಿತು.

ನಗರದ ಯುವಕರಾದ ಪ್ರಕಾಶ ಮಾರೆವಾಡೆ ನೇತೃತ್ವದಲ್ಲಿ  ಶಾಲೆಯ 86 ವಿದ್ಯಾರ್ಥಿಗಳಿಗೆ ಪೆನ್, ಪೆನ್ಸಿಲ್. ಪುಸ್ತಕ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಬಳಿಕ ಮಾತನಾಡಿದ ಶಿಕ್ಷಕ ಮಲ್ಲಿಕಾರ್ಜುನ, ಎಲ್ಲಾ ಮಕ್ಕಳಿಗೂ ಶಿಕ್ಷಣ ಸಿಗುವಂತಾಗಬೇಕು ಎನ್ನುವುದು ಸರ್ಕಾರದ ಆಶಯ. ಆದರೆ, ಕೆಲವೊಮ್ಮೆ ಬಡತನ ಕಾರಣದಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅದು ಹೆಚ್ಚಾಗಿ ಸ್ಲಂ ಪ್ರದೇಶದ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ಪ್ರತಿಯೊಬ್ಬರಿಗೈ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಸರ್ಕಾರದ ಜೊತೆಯಲ್ಲಿ ಸಂಘ-ಸಂಸ್ಥೆಗಳು ಹಾಗೂ ನಾಗರಿಕರು,ನೆರವು ನೀಡಲು ಮುಂದಾಗಬೇಕು ಎಂದರು.ಶಾಲಾ ಮುಖ್ಯ ಗುರುಗಳಾದ ಸರಸ್ವತಿ ಬಾಯಿ, ಶಿಕ್ಷಕರಾದ ಸುಜಾತ, ಲಕ್ಷ್ಮೀದೇವಿ, ಶಿವಾನಂದ, ಮಲ್ಲಿಕಾರ್ಜುನ ಸೇರಿದಂತೆ ಕಿಚಡಿ ಸುನೀಲ್ ಹಾಗೂ ರಾಘವೇಂದ್ರ ಇತರರು ಇದ್ದರು.