ಧರ್ಮ ಸಿಂಗ್ ನಿಧನ,ವಿರೋದ ಪಕ್ಷದ ನಾಯಕರಿಂದ ಸಂತಾಪ…

280

ಬೆಂಗಳೂರು/ಕೆ.ಆರ್.ಪುರ:- ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ರವರ ನಿಧನಕ್ಕೆ ವಿರೋದ ಪಕ್ಷದ ನಾಯಕ ಕೆ.ಯಸ್. ಈಶ್ವರಪ್ಪ ಸಂತಾಪ ತಿಳಿಸಿದರು.

ಕೆ.ಆರ್.ಪುರ ದಲ್ಲಿ ಮಾಧ್ಯಮದವರೋಂದಿಗೆ ಮಾತನಾಡುತ್ತಾ ರಾಜಕೀಯ ಜೀವನದಲ್ಲಿ ಸುದೀರ್ಘ ಕಾಲ ಸೋಲರಿಯದ ಸರದಾರರಂತಿದ್ದ ಧರಂಸಿಂಗ್‌ 60 ರ ದಶಕದಲ್ಲಿ ರಾಜಕೀಯ ಪ್ರವೇಶಿಸಿದವರು. ಮೊದಲಿಗೆ ನಗರಸಭೆಗೆ ನಂತರ 1972 ರಿಂದ 2004 ರವರೆಗೆ 8 ಬಾರಿ ಜೇವರ್ಗಿ ಶಾಸಕರಾಗಿ, ಎರಡು ಬಾರಿ ಬೀದರ್‌ನಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.
ಸಚಿವರಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಧರ್ಮಸಿಂಗ್‌ 2004 ರಲ್ಲಿ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿಕೂಟದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. 2004 ರಿಂದ 2006 ರವರೆಗೆ ಧರ್ಮಸಿಂಗ್ ಸಿಎಂ ಆಗಿದ್ದರು.