ಧರ್ಮಸಿಂಗ್ ನಿಧನ,ಶ್ರದ್ಧಾಂಜಲಿ ಸಭೆ..

247

ಮಂಡ್ಯ/ಮಳವಳ್ಳಿ: ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ರವರ ನಿಧನರಾದ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು, ‌‌‌ 

ಶಾಸಕ ಪಿ.ಎಂ ನರೇಂದ್ರ ಸ್ವಾಮಿ ರವರು ಧರ್ಮಸಿಂಗ್ ಭಾವಚಿತ್ರ ಕ್ಕೆ ಪುಷ್ವವನ್ನು ಹಾಕುವ ಮೂಲಕ ನಮನ ಸಲ್ಲಿಸಿದರು ನಂತರ ಮಾತನಾಡಿ, ರಾಜ್ಯದ ಲ್ಲಿ ಅಜಾತಶತ್ರು ವಾಗಿದ್ದ ಕಾಂಗ್ರೇಸ್ ದುರೀಣ , ನಮ್ಮೆಲ್ಲರ ನಾಯಕರನ್ನು ಇಂದು ಕಳೆದುಕೊಂಡಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು . ಈ ಸಂದಭ೯ದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್ .ಎನ್ ವಿಶ್ವಾಸ್, ಉಪಾಧ್ಯಕ್ಷ ಮಾಧು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಜೆ ದೇವರಾಜು, ಪುಟ್ಟರಾಮು, ಚೋಟನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಸಿ.ಪಿ ರಾಜು, ಎಪಿಎಂಸಿ ಅಧ್ಯಕ್ಷ ಅಂಬರೀಶ್, ಪಿಎಲ್ ಡಿ ಬ್ಯಾಂಕು ಅಧ್ಯಕ್ಷ ವೆಂಕಟರಾಜು, ಶಾಂತರಾಜು, ಸುಂದ್ರಪ್ಪ,ಅಖಿಲ್, ಸೇರಿದಂತೆ ಮತ್ತಿತ್ತರರು ಇದ್ದರು.