ದುರಸ್ಥಿ ಕಾರ್ಯ ಪರಿಶೀಲನೆ..

383

ಬಳ್ಳಾರಿ/ಹೊಸಪೇಟೆ:ವಿಶ್ವ ಪಾರಂಪರಿಕ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಸುತ್ತಲು ನಡೆಯುವತ್ತಿರುವ ಪ್ರಭಾವಳಿಗಳ ದುರಸ್ಥಿ ಕಾರ್ಯ ಸ್ಥಳಗಳಿಗೆ ಗುರುವಾರ ಪುರಾತತ್ವ ಇಲಾಖೆ ವಿಭಾಗ ಅಧಿಕಾರಿ ಮೂರ್ತೇಶ್ವರಿ ಭೇಟಿ ನೀಡಿ ಪರಿಶೀಲಿಸಿದರು. 

ಕಳೆದ ತಿಂಗಳಿನಿಂದ ನಡೆಯುತ್ತಿರುವ ಉಬ್ಬು ಶಿಲ್ಪ ಕಾಮಗಾರಿ,  ಭೋಜನ ಶಾಲೆ ದುರಸ್ಥಿ ಕಾರ್ಯ, ದೇವಸ್ಥಾನದ ಪೈಪ್‍ಲೈನ್ ಕಾರ್ಯಗಳು ತುರ್ತಾಗಿ ನಡೆಸುವಂತೆ ಕಾಮಗಾರಿ ಮೇಸ್ತ್ರೀಗಳಿಗೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು. ಮಳೆಗಾಲ ಆರಂಭವಾಗಿದ್ದು ಕೆಲಸ ಬೇಗವಾದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ದುರಸ್ಥಿ ಕಾಮಗಾರಿಗಳಿಗೆ ಹೆಚ್ಚಿನ ಆಧ್ಯತೆ ನೀಡಿ ಬೇಗ ಮುಗಿಸುವಂತೆ ತಿಳಿಸಿದರು. ನಂತರ ಹಂಪಿ ವಿದ್ಯಾರಣ್ಯ ಮಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಮಾತನಾಡಿ, ದುರಸ್ಥಿ ಕಾರ್ಯಗಳು ವಿಳಂಭವಾಗುತ್ತಿದೆ. ಇದರಿಂದ ಪ್ರವಾಸಿಗರಿಗೆ ಭಕ್ತರಿಗೆ ತೊಂದರೆಯಾಗುತ್ತಿದ್ದು ಬೇಗ ಬೇಗ ಕಾಮಗಾರಿಯನ್ನು ಮುಗಿಸಿಕೊಡಿ. ಜತೆಗೆ ದುರಸ್ಥಿ ಕಾಮಗಾರಿ ನೆರವಿಗೆ  ವಿದ್ಯಾರಣ್ಯ ಮಠದಿಂದ ಸಹಾಕಾರ ನೀಡಲಾಗುವುದು ಎಂದರು. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಅಧಿಕಾರಿ ತೇಜಸ್ವಿ, ಕಿರಿಯ ಸಂರಕ್ಷಣ ಅಧಿಕಾರಿ ಹೆಚ್.ರವೀಂದ್ರ ಇದ್ದರು.