ಜಾಗೃತಿ ಜಾಥಾ ,CITU ಮಹಾ ನಡೆ.

385

ಚಿಕ್ಕಬಳ್ಳಾಪುರ/ಚಿಂತಾಮಣಿ ನಗದರ ಬಾಗೇಪಲ್ಲಿ ವೃತ್ತ ದಿಂದ ಹೊರಟ CITU ಜಾಗೃತಿ ಜಾಥಾ.

ಕೇಂದ್ರ ಸರ್ಕಾರ ಕಾರ್ಮಿಕರ ವಿರುದ್ಧವಾಗಿ ತರುವಂತಹ ನೀತಿಗಳನ್ನು ವಿರೋಧಿಸಿ CITU ಜಿಲ್ಲೆಯಿಂದ ಜಿಲ್ಲೆ ಗೆ ಮಹಾ ನಡೆ ಹಮ್ಮಿಕೊಂಡಿದರೆ.

ರಾಜ್ಯ ವ್ಯಾಪಿ ರೂ.18,000/-ಸಮಾನ ಕನಿಷ್ಟ ವೇತನಕ್ಕಾಗಿ.
ಅಸಂಘಟಿತ ಕಾರ್ಮಿಕರಿಗೆ ವಸತಿ, ಭವಿಷ್ಯನಿಧಿ ಮತ್ತು ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿಗಾಗಿ.
ಬೆಲೆ ಏರಿಕೆ ನಿಯಂತ್ರಣ ಮತ್ತು ಸಾರ್ವತ್ರಿಕ ರೇಷನ್ ವ್ಯವಸ್ಥೆಗಾಗಿ,
ಗುತ್ತಿಗೆ ಪದ್ಧತಿ ನಿಯಂತ್ರಣ, ಗುತ್ತಿಗೆ ಮುಂತಾದ ಖಾಯಂಯೇತರ ಕಾರ್ಮಿಕರ ಖಾಯಂಗೆ ಶಾಸನಕ್ಕಾಗಿ.
ಸಾರ್ವಜನಿಕ ಉದ್ಯಮಗಳ ಖಾಸಗೀಕರಣದ ವಿರುದ್ಧ.
ಕಾರ್ಮಿಕ ಸಂಘದ ಕಡ್ಡಾಯ ಮಾನ್ಯತೆಗೆ ಶಾಸನಕ್ಕಾಗಿ ಹಾಗೂ ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟಿನ ಜಾರಿಗಾಗಿ,ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ
ಕಾರ್ಪೊರೇಟ್ ಬಂಡವಾಳದ ಪರ ಕಾರ್ಮಿಕ ಕಾನೂನುಗಳ ತಿದ್ದುಪಡಿ ವಿರೋಧಿಸಿ
ಸ್ಕೀಂ ಕಾರ್ಮಿಕರಿಗೂ ಕನಿಷ್ಠ ವೇತನಕ್ಕಾಗಿ,ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಕೇಂದ್ರ ಸರ್ಕಾರದ ಅನುದಾನ ಕಡಿತ ವಿರೋಧಿಸಿ ಈ ದಿನ CITU ಜಾಗೃತಿ ಜಾಥಾ ಮಹಾನಡೆ ಹಮ್ಮಿಕೊಳ್ಳಲಾಗಿದೆ ಎಂದು CITU ಅಧ್ಯಕ್ಷರು ಎಸ್ ವರಲಕ್ಷ್ಮಿ ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯ ದರ್ಶಿ ಎಂ.ಎಸ್ ಮೀನಾಕ್ಷತ ಸುಂದರಂ ಮತ್ತು CITU ಕಾರ್ಯಕರ್ತರು ಭಾಗವಹಿಸಿದ್ದರು.