ಅದ್ದೂರಿ ಅಭಿನಂದನಾ ಸಮಾರಂಭ

281

ಬಳ್ಳಾರಿ /ಹೊಸಪೇಟೆ: ಮರಿಯಮ್ಮನಹಳ್ಳಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿ ಒಳ್ಳೆಯರಾಜಕಾರಣಿಗಳು ಸಿಗುವುದು ಬಹಳ ಕಷ್ಟ ಮತ್ತುಅಪರೂಪವಾಗಿದೆ ಎಂದು ಮಾಜಿ ಶಾಸಕ ಶಿರಾಜ್ ಶೇಖ್ಅವರು ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿಭಾನುವಾರ ಎಸ್.ಎಸ್. ಸೇವಾ ಸಂಸ್ಥೆ
ಹಾಗೂ  ಎಲ್.ಪರಮೇಶ್ವರಪ್ಪ ಅವರ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ನಿವೃತ್ತ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಎಲ್.ಪರಮೇಶ್ವರಪ್ಪ ಅವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ಇತ್ತೀಚಿಗೆ ಬರುವ ರಾಜಕಾರಣಿಗಳು ಏನೇನೋಆಶ್ವಾಸನೆಗಳನ್ನು ಕೊಟ್ಟು ಮತದಾರರಿಂದ ಮತಹಾಕಿಸಿಕೊಂಡು ನಂತರ ಟಾಟಾ ಮಾಡಿಕೊಂಡುಓಡಾಡುವಂಥಹ ರಾಜಕಾರಣಿಗಳನ್ನು ತಾವೂ ನೋಡಿದ್ದಿರಿಮತ್ತು ನಾನೂ ಬಹಳ ಜನರನ್ನು ನೋಡಿದ್ದೀನಿ. ಆದರೆಎಲ್. ಪರಮೇಶ್ವರಪ್ಪ ಅವರು ಸರ್ಕಾರಿ ಅಽಕಾರಿಯಾಗಿಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿಗುರುತಿಸಿಕೊಂಡಿದ್ದಾರೆ. ಪರಮೇಶ್ವರಪ್ಪ ಅವರ ಸೇವೆಯಅವಶ್ಯಕತೆ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಬೇಕಾಗಿದೆ.ಇದಕ್ಕೆ ಪರಮೇಶ್ವರಪ್ಪ ಅವರು ಬದ್ದರಾಗಬೇಕು ಎಂದುಅವರು ಹೇಳಿದರು.

ಪರಮೇಶ್ವರಪ್ಪ ಅವರು ಅಪರೂಪದ ವ್ಯಕ್ತಿಯಾಗಿದ್ದಾರೆ.ಸರ್ಕಾರಿ ಅಽಕಾರಿಯಾಗಿ ಜನರ ಕಷ್ಟಗಳಿಗೆ ಸ್ಪಂದಿಸುವುದುಬಹಳ ಕಡಿಮೆ. ಆದರೆ ಅವರ ಅಽಕಾವಽಯಲ್ಲಿ ಈಗಾಗಲೇಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿ ನಿಮ್ಮ ಮುಂದೆಬರುತ್ತಿದ್ದಾರೆ. ಆದ್ದರಿಂದ ನಿಮ್ಮೆಲ್ಲರ ಆಶೀರ್ವಾದ ಮತ್ತುಸಹಕಾರ ಇರಲಿ ಎಂದು ಅವರು ಹಾರೈಸಿದರು.

ಮರಿಯಮ್ಮನಹಳ್ಳಿಯ ಜನರು ಹೃದಯ ಶ್ರೀಮಂತಿಕೆ ಇರುವಜನರು ಆಗಿದ್ದಾರೆ. ಸಮಾಜ ಸೇವೆ, ಜನಮನ ಗೆಲ್ಲುವಂತಹವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಉತ್ತಮ ಸ್ಥಾನಮಾನಗಳನ್ನುನೀಡಿ ಗೌರವಿಸುತ್ತಾರೆ. ಈ ಹಿಂದೆ ಮರಿಯಮ್ಮನಹಳ್ಳಿಯಲ್ಲಿಸಾಧನೆ  ಮಾಡಿದ ಡಾ.ಬಿ.ಅಂಬಣ್ಣ, ಡಾ.ಸುಬ್ರಮಣ್ಯಂ,  ಕರ್ಕಿಹಳ್ಳಿ ಮಂಜುನಾಥ ಅವರ ಸೇವೆಯನ್ನುಗುರುತಿಸಿ ಸನ್ಮಾನಿಸಿರುವ ಕಾರ್ಯಕ್ರಮದಲ್ಲಿ ನಾನುಭಾಗವಹಿಸಿ ಸನ್ಮಾನಿಸಿದ್ದೆ. ಅದೇ ರೀತಿಯಲ್ಲಿ ಎಲ್.ಪರಮೇಶ್ವರಪ್ಪ ಅವರ ಸಾಧನೆಯನ್ನು ನೋಡಿಮರಿಯಮ್ಮನಹಳ್ಳಿಯ ನಾಗರೀಕರು ಹಾಗೂ ಬಳ್ಳಾರಿ ಜಿಲ್ಲೆಯಅವರ ಅಭಿಮಾನಿಗಳು ಹಮ್ಮಿಕೊಂಡಿರುವ ಅಭಿನಂದನಾಸಮಾರಂಭದಲ್ಲಿ ಪರಮೇಶ್ವರಪ್ಪ ಅವರನ್ನುಸನ್ಮಾನಿಸುತ್ತಿರುವುದು ಸಂತೋಷ ಎನಿಸುತ್ತದೆ ಎಂದು ಅವರುಹೇಳಿದರು.

ಸ್ಥಳೀಯ ಮುಖಂಡ ಎಸ್. ಎಸ್. ಚಂದ್ರಶೇಖರ್ಮಾತನಾಡಿ, ಎಲ್. ಪರಮೇಶ್ವರಪ್ಪ ಅವರು ದಕ್ಷಅಽಕಾರಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಆಗಿದ್ದಾರೆ.ಸಮಾಜ ಚಿಂತಕರಾಗಿ ಸಮಾಜದ ಬಗ್ಗೆ ಕಳಕಳಿಯನ್ನುಹೊಂದಿರುವುದರಿಂದ ಇಂಥವರು ರಾಜಕೀಯ ರಂಗ ಪ್ರವೇಶಮಾಡಬೇಕು. ರಾಜಕೀಯದ ಅಧಿಕಾರ ಎಲ್ಲಾ ಅಭಿವೃದ್ದಿಕೆಲಸಗಳಿಗೆ ಮಾಸ್ಟರ್ ಬೀಗದ ಕೈ ಇದ್ದ ಹಾಗೆ, ಉತ್ತಮವ್ಯಕ್ತಿಗಳ ಮತ್ತು ಸಮಾಜ ಕಳಕಳಿ ಇರುವವರ ಕೈಯಲ್ಲಿಅಽಕಾರ ಇರಬೇಕು ಎಂದು ಅವರು ಹೇಳಿದರು.

ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಹಾಗೂಆರ್ಯವೈಶ್ಯ ಸಮಾಜದ ಅಧ್ಯಕ್ಷ ಎಂ. ವಿಶ್ವನಾಥ ಶೆಟ್ಟಿಸಮಾರಂಭದ ಅಧ್ಯಕ್ಷತೆವಹಿಸಿಕೊಂಡು ಸಭೆಯಲ್ಲಿಮಾತನಾಡಿದರು.

ಸ್ಥಳೀಯ ಮುಖಂಡ ಹುಬ್ಬಳ್ಳಿ ಪಾಂಡುರಂಗ ಶೆಟ್ಟಿಸಭೆಯಲ್ಲಿ ಮಾತನಾಡಿದರು.

ಸ್ಥಳೀಯ ಮುಖಂಡರಾದ ಎಂ. ಡಿ. ಬಸಪ್ಪ, ಎಚ್.ಶ್ರೀನಿವಾಸ ರಾವ್, ಜಿ. ರಮೇಶ್ ಕುಮಾರ್ ಜೈನ್, ಎಚ್.ಇಮಾಮ್ ಸಾಹೇಬ್, ಬಿ. ಎಂ. ಎಸ್. ಚನ್ನವೀರಯ್ಯ,ರೆಡ್ಡಿ ಹನುಮಂತಪ್ಪ, ಹುರುಕೊಳ್ಳಿ ಬಸವರಾಜಪ್ಪ, ಎಚ್.ಇಸ್ಮಾಯಿಲ್ ಸಾಹೇಬ್, ತಳವಾರ ದೊಡ್ಡ ರಾಮಣ್ಣ,ಪೋತಲಕಟ್ಟೆ ಜಂಬಣ್ಣ, ಹೇಮ್ಲಾನಾಯ್ಕ, ಏಕಾಂಬ್ರೇಶ್ನಾಯ್ಕ, ಉಜ್ಜನಿ ರುದ್ರಪ್ಪ, ಬಿ. ಆನಂದ, ರುದ್ರಾನಾಯ್ಕ,ಕೊಟ್ಟೂರು ಕೊಟ್ರೇಶಪ್ಪ, ಪಟ್ಟಣಪಂಚಾಯಿತಿ ಉಪಾಧ್ಯಕ್ಷಬಂಗಾರಿ ಹನುಮಂತ, ಪಟ್ಟಣ ಪಂಚಾಯಿತಿ ಸದಸ್ಯರಾದಎಸ್. ನವೀನ್ ಕುಮಾರ್, ಎಲ್. ಮಂಜುನಾಥ,ವಿಷ್ಣುನಾಯ್ಕ ಸೇರಿದಂತೆ ಇತರರು ಸಭೆಯಲ್ಲಿಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಎಲ್. ಪರಮೇಶ್ವರಪ್ಪ ಅವರನ್ನುಪಟ್ಟಣದಲ್ಲಿ ಭವ್ಯ ಮೆರವಣಿಗೆ ನಡೆಸಿದರು.

ಹುರುಕೊಳ್ಳಿ ಮಂಜುನಾಥ ಸ್ವಾಗತಿಸಿದರು. ಎ. ರೆಹಮಾನ್ವಂದಿಸಿದರು. ಮ. ಬ. ಸೋಮಣ್ಣ ನಿರೂಪಿಸಿದರು.