ಸರ್ವಧರ್ಮ ಸಾಮೂಹಿಕ ವಿವಾಹಗಳು

427

ಬಳ್ಳಾರಿ /ಹೊಸಪೇಟೆ:ತಾಲೂಕು ಶಾಮಿಯಾನ ಸಪ್ಲೇಯರ್ಸ್ ಸಂಘದ 20ನೇ ವರ್ಷದ ವಾರ್ಷಿಕೋತ್ಸವ ಹಾಗೂ 25 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹಗಳನ್ನು ನಗರದ ನೆಹರೂ ಕಾಲೋನಿಯ ಸಹಕಾರ ಸಂಘದ ಮೈದಾನದಲ್ಲಿ ಆ.3 ಮತ್ತು 4ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ನರಸಿಂಹಮೂರ್ತಿ ಅಪ್ಪಣ್ಣ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಗಾಲಕ್ಕೆ ತುತ್ತಾಗಿರುವ ಈ ಭಾಗದಲ್ಲಿ ಅನೇಕ ಬಡಕುಟುಂಬಗಳು ಆರ್ಥಿಕ ಸಂಕಷ್ಠೀಕ್ಕಾಡಿಗಿವೆ. ಸಾಮಾಜಿಕ ಕಳಕಳಿಯಿಂಸ ಸಪ್ಲೆಯರ್ಸ್ ಸಂಘದಿಂದ ಸಾಮೂಹಿಕ ವಿವಾಹಗಳನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಿದೆ. ಈವರೆಗೂ 25 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ನೂತನ ದಾಂಪತ್ಯ ಜೀವನಕ್ಕೆ ಕಾಲಿಡಲು ನೊಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಎರಡು ದಿನಗಳ ಕಾಲ ನೊಂದಣಿಗೆ ಅವಕಾಶವಿದ್ದು, ಹಿಂದೂ ಮುಸ್ಲೀಂ, ಕ್ರಿಶ್ಚಿಯನ್ನರನ್ನೊಳಗೊಂಡ ಸಾಮೂಹಿಕ ಮದುವೆಯಾಗಿದೆ. ಆಸಕ್ತರು ಕೂಡಲೇ ಸಂಘವನ್ನು ಸಂಪರ್ಕಿಸಿ ನೊಂದಣಿ ಮಾಡಿಕೊಳ್ಳಬಹುದು. ನವಜೋಡಿಗಳಿಗೆ ವಿವಾಹ ಸಂದರ್ಭದಲ್ಲಿ ಎರಡು ತಾಳಿ ಬಟ್ಟು, ಕಾಲುಂಗುರ, ಬಟ್ಟೆ ನೀಡಲಾಗುತ್ತದೆ. ಸರಕಾರದಿಂದ ಭಾಗ್ಯಲಕ್ಷ್ಮೀ ಬಾಂಡ್ಗಳನ್ನು ಸಹ ವಿತರಿಸಲಾಗುವುದು.
ಆ.3 ರಂದು ಬೆಳಿಗ್ಗೆ 8ಕ್ಕೆ ಧ್ವಜಾರೋಹಣ, ನಂತರ ಮೇನ್ ಬಜಾರಿನ ವಡಕರಾಯ ದೇವಸ್ಥಾನದಿಂದ ವಿವಿಧ ಕಲಾತಂಡಗಳಿಂದ ರಾಷ್ಟ್ರೀಯ ನಾಯಕರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೆ ಹಂಪಿ ಜಿಪಂ ಸದಸ್ಯ ಪ್ರವೀಣ್ ಸಿಂಗ್ ಚಾಲನೆ ನೀಡಲಿದ್ದಾರೆ. ಸಂಜೆ 4ಕ್ಕೆ ವಾರ್ಷಿಕೋತ್ಸವದಂಗವಾಗಿ ಹಿರಿಯ ನಾಗರೀಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಗರಗ-ನಾಗಲಾಪುರದ ಮರಿ ಮಹಾಂತಸ್ವಾಮಿಗಳು ಸಾನ್ನಿಧ್ಯವಹಿಸಲಿದ್ದಾರೆ. ಎನ್ಕೆಟಿಡಿಡಬ್ಲ್ಯೂಎ ಸಿದ್ದಾಪುರ ಅಧ್ಯಕ್ಷ ಮೆಹಬೂಬ್ ಮುಲ್ಲಾ ಉದ್ಘಾಟಿಸುವರು. ಸಂಘದ ಮಾಜಿ ಅಧ್ಯಕ್ಷ ವಿ.ಜಂಬುನಾಥ ಅಧ್ಯಕ್ಷತೆವಹಿಸುವರು. ಸಂಘಟೆನಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಆ.4ರಂದು ಬೆಳಿಗ್ಗೆ ಶೋಭಯಾತ್ರೆ, ಸಾಮೂಹಿ ವಿವಾಹಗಳು ನಡೆಯಲಿವೆ. ಕೊಟ್ಟೂರುಸ್ವಾಮಿ ಮಠದ ಡಾ.ಸಂಗನಬಸವ ಮಹಾಸ್ವಾಮಿಗಳು, ಸೈಯದ್ ಮಹೆಬೂಬ್ ಫೀರ್ ಖಾದ್ರಿ, ಸೈಯದ್ ಮುಸ್ತಾಕ್ ಅಹಮದ್ ಖಾಜಿ ತಿರ್ಮದಿ ಹಾಗೂ ಪಾಸ್ಟರ್ ರೆವಿರೆಂಡ್ ರಾಮನ್ನ ಜೋಸಫ್ ಸಾನ್ನಿಧ್ಯವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಸ್ ಎಸ್ ಲಾಡ್ ಉದ್ಘಾಟಿಸುವರು. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ, ಶಾಸಕ ಆನಂದ್ಸಿಂಗ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೆ.ನರಸಿಂಹಮೂರ್ತಿ ಅಪ್ಪಣ್ಣ ಅಧ್ಯಕ್ಷತೆವಹಿಸುವರು. ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ನವದೆಹಲಿ ಎಐಟಿಡಿ ಡಬ್ಲ್ಯೂಓ ಸಹಕಾರ್ಯದರ್ಶಿ ಬಿ.ಎಂ.ಸೋಮಶೇಖರ ಮಾತನಾಡಿ, ಅಭದ್ರತೆಯ ನಡುವೆಯೂ ಸಂಘಟನೆಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ.
ಶ್ಯಾಮಿಯಾನ ಸಪ್ಲೇಯರ್ಸ್ಗಳಲ್ಲಿ ದುಡಿಯುವ ಕಾರ್ಮಿಕರಿಗೆ ಭದ್ರತೆ ಇಲ್ಲದಂತಾಗಿದೆ. ಕಾರ್ಮಿಕರಿಗೆ ಭದ್ರತೆ ಮತ್ತು ಇತರ ಸರಕಾರಿ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಸಂಘದ ಗೌರವಾಧ್ಯಕ್ಷ ಈ.ಸುಬ್ರಹ್ಮಣ್ಯ, ಉಪಾಧ್ಯಕ್ಷ ಎಂ.ಮೆಹಬೂಬ್, ಪ್ರಧಾನ ಕಾರ್ಯದರ್ಶಿ ಎಂ.ಮಂಜುನಾಥ, ಖಜಾಂಚಿ ಬಿ.ಕಿಶೋರ, ಸಹ ಖಜಾಂಚಿ ಎನ್.ಟಿ.ರಾಜು, ಸಂಘಟನ ಕಾರ್ಯದರ್ಶಿ ಕೆ.ಶಂಕರಗೌಡ, ಸಹಕಾರ್ಯದರ್ಶಿ ಮೋಹಿನ್ ಉಪಸ್ಥಿತರಿದ್ದರು.