ನಾಡ ಪ್ರಭು ಕೆಂಪೇಗೌಡರ ಜಯಂತೋತ್ಸವ..

352

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ನಾಡ ಪ್ರಭು ಕೆಂಪೇಗೌಡರನ್ನು ಒಂದು ಜಾತಿ ಮತ್ತು ಸಮುದಾಯಕ್ಕೆ ಸೀಮಿತಗೊಳಿಸದೆ ಈಗಿನ ಜನತೆ ಅವರ ವಿಚಾರಗಳನ್ನು ತಿಳಿಯಬೇಕು. ಅವರ ಆಶೆಯದಂತೆ ಎಲ್ಲಾ ಸಮುದಾಯವು ಸಹ ಬೆಂಗಳೂರಿನಲ್ಲಿ ಇಂದು ಐಕ್ಯತೆಯಿಂದ ಬದುಕುವಂತೆ ಮಾಡಿದರು ಎಂದು ಶಾಸಕ ಎಂ. ರಾಜಣ್ಣ ಹೇಳಿದರು.

ನಗರದ ಮಿನಿ ವಿಧಾನಸೌದ ಸಭಾಂಗಣದಲ್ಲಿ ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ನಾಡ ಪ್ರಭು ಕೆಂಪೇಗೌಡರ 508ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರನ್ನು ಕಟ್ಟಿ ಬೆಳಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲಬೇಕು ಆಗ ಅವರು ಮಾಡಿದ ಅಭಿವೃದ್ದಿಯಿಂದ ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಗಳಿಸಿದೆ. ಹಲವಾರು ಕಡೆಯಿಂದ ಪರ ಭಾಷೀಯ ಧರ್ಮದ ಜನರು ಸಹ ಆಗಮಿಸಿ ಕೂಡಿ ಬಾಳುವಂತ ಹೆಮ್ಮೆಯ ನಗರ ಬೆಂಗಳೂರು ಆಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹ ಕೆಂಪೇಗೌಡರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.

ತಾಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ ಜನ ಸಾಮಾನ್ಯರ ಅಭಿವೃದ್ಧಿಗಾಗಿ ಶ್ರಮಿಸಿದವರು ಬೆಂಗಳೂರು ನಗರದಲ್ಲಿ ಕರೆಗಳನ್ನು ಕಟ್ಟಿಸಿ ಕೆರೆಗಳನ್ನು ಕರೆಗಳ ನೀರನ್ನು ಸಂವೃದ್ದಿಗೊಳಿಸಿದವರು. ಅವರ ಆದರ್ಶದಂತೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿರುವ ಸುಮಾರು 165 ಕೆರೆಗಳನ್ನು ಸಂರಕ್ಷಿಸಿ ಪುನ:ಶ್ಚೇತನ ಗೊಳಿಸುವಂತ ಕೆಲಸಕ್ಕೆ ತಾಲ್ಲೂಕಿನ ಜನತೆ ಒಗ್ಗೂಡಿ ಕೆಲಸ ಮಾಡುಬೇಕು ಆಗ ಮಾತ್ರ ಸಾಧ್ಯ ಕೆಂಪೇಗೌಡರ ಆದರ್ಶ ಜನರ ಮನಸ್ಸಿನಲ್ಲಿ ಶಾಶ್ವತವಾಗಿ
ಉಳಿಯಲು ಎಂದರು.

ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಕ್ರಮ ಜರುಗಿಸಿ ಶೋಕಾಸ್ ನೋಟೀಸು ಮಾಡುವುದಾಗಿ ತಿಳಿಸಿದರು.

ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವ ಮೂಲಕ ಹಲವಾರು ವಿದ್ಯಾರ್ಥಿಗಳನ್ನು ಪುರಸ್ಕದರಿಸಿದರು.

ಕಾರ್ಯಕ್ರಮದಲ್ಲಿ ಬಿಇಒ ರಘುನಾಥರೆಡ್ಡಿ, ನೂತನ ನಗರಸಭೆ ಆಯುಕ್ತ ಚಲಪತಿ, ನಗರಸಭೆ ಉಪಾದ್ಯಕ್ಷೆ ಪ್ರಭಾವತಿ ಸುರೇಶ್, ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶೋಭಾ, ವಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಯುವ ಸೇನೆ ಅಧ್ಯಕ್ಷ ವೆಂಕಟಸ್ವಾಮಿ ಹಾಗೂ ಮುಂತಾದವರು ಭಾಗವಹಿಸಿದ್ದರು.