ಭಕ್ತರ ದುಶ್ಚಟಗಳನ್ನೆ ಬಿಕ್ಷೆ ಬೇಡುವ ಶ್ರೀಗಳು..

526

ಬಾಗಲಕೋಟೆ : ಕಳೆದ 40 ವರ್ಷಗಳಿಂದ ಜೋಳಿಗೆ ಹಿಡಿದು ಭಕ್ತರ ದುಶ್ಚಟಗಳನ್ನ ಬೇಡ್ತಿರೋ ಸ್ವಾಮೀಜಿ, ತಮ್ಮ ದುಶ್ಚಟಗಳನ್ನ ಸ್ವಾಮೀಜಿಯ ಜೋಳಿಗೆಗೆ ಹಾಕಿ ಮುಕ್ತರಾಗ್ತಿರೋ ಭಕ್ತರು, ಸ್ವಾಮೀಜಿಗಳ ಜೋಳಿಗೆ ಸೇವೆಯ ಪ್ರತೀಕವಾಗಿ ನಿರಾಳವಾದ ಸಾವಿರಾರು ಕುಟುಂಬಗಳು.ಇಂತಹವೊಂದು ಸಂದರ್ಭಕ್ಕೆ ಸಾಕ್ಷಿಯಾಗೋದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಲಕಲ್ ಪಟ್ಟಣದ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ.ಈ ಮಠದ ಸ್ವಾಮೀಜಿಗಳಂದ್ರೆ ಅವರೆ ಡಾ.ಮಹಾಂತಪ್ಪ ಶ್ರೀಗಳು. ನೇರ ನಡೆ ನುಡಿಗೆ ಹೆಸರುವಾಸಿಯಾಗಿರೋ ಇವ್ರು ಕಳೆದ 40 ವರ್ಷಗಳ ಹಿಂದೆ ಹುನಗುಂದದಲ್ಲಿ ಭಕ್ತರ ಮನೆಗೆ ಹೋದಾಗ ವಿಧವೆಯೊಬ್ಬಳು ಬಿಕ್ಕಳಿಸಿ ಅಳೋದನ್ನ ಕಂಡು ಪ್ರಶ್ನಿಸಿದಾಗ ,ಆಕೆ ಪತಿ ಅತಿಯಾದ ಸರಾಯಿ ಸೇವೆಯಿಂದ ಮೃತಪಟ್ಟಿದ್ದನ್ನ ಕೇಳಿ ಸಮಾಜದಲ್ಲಿರೋ ಇಂತಹ ಕುಟುಂಬಗಳ ನಿವಾರಣೆಗೆ ಶಪಥ ತೊಟ್ಟ ಸ್ವಾಮೀಜಿ ಅಂದಿನಿಂದ ಮಹಾಂತ ಜೋಳಿಗೆ ಹಿಡಿದು ಭಕ್ತರಲ್ಲಿರೋ ದುಶ್ಚಟ ಹಾಕಿಸುತ್ತ ಮುನ್ನಡೆದರು. ಪ್ರತಿನಿತ್ಯ ಹಳ್ಳಿ ಹಳ್ಳಿಗೂ ಅಲೆದಾಡಿ ಜನರಲ್ಲಿ ಅರಿವು ಮೂಡಿಸಿದ್ರು. ಹೋದಲೆಲ್ಲಾ ಭಕ್ತರು ತಮ್ಮ ದುಶ್ಚಟಗಳಾದ ತಂಬಾಕು ಚೀಟ್ಗಳು, ಸರಾಯಿ ಪ್ಯಾಕೇಟ್, ಇಸ್ಟೀಟ್ ಎಲೆ ಹೀಗೆ ಎಲ್ಲವನ್ನ ಮಹಾಂತ ಜೋಳಿಗೆಗೆ ಹಾಕಿ ಅಂದಿನಿಂದ ದುಶ್ಚಟ ಬಿಟ್ಟು ನಿರಾಳ ಜೀವನ ಮಾಡಲು ಮುಂದಾದ್ರು.

ಇತ್ತ ಸ್ವಾಮೀಜಿಗಳ ಸೇವೆಯನ್ನ ಇಂದಿನ ಗುರುಮಹಾಂತ ಶ್ರೀಗಳು ಮತ್ತು ಮಠದ ಅಕ್ಕನ ಬಳಗದ ಮಹಿಳಾ ಮಂಡಳ ಹೀಗೆ ಪ್ರತಿಯೊಬ್ಬರು ಈ ಸೇವೆಯನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಶ್ರೀಗಳ ಸಾಮಾಜಿಕ ಕಳಕಳಿಯ ಫಲವಾಗಿ ಧಾರವಾಡ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ, ಸರ್ಕಾರದಿಂದ 2008ರ ಬಸವ ಪುರಸ್ಕಾರ ಪ್ರಶಸ್ತಿ, 2011ರ ಸಂಯಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದೀಗ ದುಶ್ಚಟ ನಿವಾರಣೆಗಾಗಿ ಕಳೆದ 40 ವರ್ಷಗಳ ಸೇವೆಯ ಪ್ರತೀಕವಾಗಿ ಇಂದು ರಾಜ್ಯ ಸರ್ಕಾರ ಮಹಾಂತ ಶ್ರೀಗಳ ಹುಟ್ಟಿದ ದಿನ ಅಂದ್ರೆ ಅಗಸ್ಟ್ 1 ಇನ್ಮುಂದೆ ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿದೆ. ಭಕ್ತರು ಮಹಾಂತ ಶ್ರೀಗಳ 88ನೇ ಹುಟ್ಟುಹಬ್ಬವನ್ನ ವ್ಯಸನಮುಕ್ತ ದಿನವನ್ನಾಗಿ ಆಚರಿಸುತ್ತಿದ್ದು, ಅವರು ನಮಗೆಲ್ಲಾ ಆದರ್ಶ ಅಂತಾರೆ ಭಕ್ತರು..