ಅಕ್ರಮ ಗ್ಯಾಸ್ ಸಿಲಿಂಡರ್ ರೀಪಿಲ್ಲೀಂಗ್.

480

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಅಕ್ರಮ ವಾಗಿ ಗ್ಯಾಸ್ ಸಿಲಿಂಡರ್ ಗಳಲ್ಲಿ ಗ್ಯಾಸ್ ಅನ್ನು ರೀಪಿಲ್ಲೀಂಗ್ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಪಿ.ಎಸ್. ಐ ಲಿಯಾಕತ್ಉಲ್ಲಾ ಮತ್ತು ಪೊಲೀಸ್ ಸಿಬ್ಬಂದಿ ‌ಗ್ಯಾಸ್ ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದರೆ.

ಸ್ಥಳದಲ್ಲಿ ಇದ್ದಾ 4 ಭಾರತ್ ಕಂಪನಿಯ ಗ್ಯಾಸ್ ಸಿಲಿಂಡರ್ ಮತ್ತು ಹೆಚ್.ಪಿ ಕಂಪನಿಯ ಸಿಲಿಂಡರ್ ಗಳಿದ್ದು ಆ ಪೈಕಿ 3 ಭಾರತ್ ಕಂಪನಿಯ ಗ್ಯಾಸ್ ಸಿಲಿಂಡರ್ ಗಳ ತುಂಬಾ ಗ್ಯಾಸ್ ಇದ್ದು .ಒಂದರಲ್ಲಿ ಅರ್ಧ ಭಾಗ ಗ್ಯಾಸ್ ಇರುವುದಾಗಿ ಮತ್ತು ಹೆಚ್.ಪಿ ಕಂಪನಿಯ ಸಿಲಿಂಡರ್ ಖಾಲಿ ಇರುವುದಾಗಿ ತಿಳಿದುಬಂದಿದೆ.
ಸ್ಥಳದಲ್ಲಿ ಗ್ಯಾಸ್ ರೀಪಿಲ್ಲೀಂಗ್ ಮಾಡಲು ಒಂದು ಪೈಪ್ ಮತ್ತು ಇದರ ಪಕ್ಕದಲ್ಲಿ ಒಂದು ಎಲೆಕ್ಟ್ರಾನಿಕ್ ತೂಕದ ಮಿಷನ್ ಇರುತ್ತದೆ.
ಗ್ಯಾಸ್ ಸಿಲಿಂಡರ್ ರೀಪಿಲ್ಲೀಂಗ್ ಮಾಡುತ್ತಿದ್ದ ಆಸಾಮಿ ಪೊಲೀಸರ ಜೀಪ್ ಅನ್ನು ನೋಡಿ ಸ್ಥಳದಿಂದ ಓಡಿ ಹೋಗಿದ್ದು.
ಓಡಿ ಹೋಗಿದ ಅಸಾಮಿ ಗ್ಯಾಸ್ ಸಿಲಿಂಡರ್ ರೀಪಿಲ್ಲೀಂಗ್ ಅನ್ನು ಸದರಿ ಮನೆ ಅಲ್ಲಿಯೇ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಲೆಉಲ್ಲಾ ಷರೀಫ್ (ಅಲಿ ಬಿನ್ ಲೇಟ್ ಮೊಹಿದ್ದೀನ್ ಷರೀಫ್) 38 ವರ್ಷ ಮುಸ್ಲಿಂ ಆಟೋ ಚಾಲಕ ಚಿನ್ನಸಂದ್ರ ಗ್ರಾಮದ ವನ್ನು ಎಂಬುದನ್ನು ಮಾಡುತ್ತಿರುವುದಾಗಿ ತಿಳಿದುಬಂದಿದೆ. ಇವನ್ನು ಯಾವುದೇ ಪರವಾನಿಗೆಯನ್ನು ಪಡೆಯಾದೇ ಅಕ್ರಮವಾಗಿ ಸಾರ್ವಜನಿಕ ಸ್ಥಳ ಹಾಗೂ ಜನ ವಸತಿ ಇರುವ ಸ್ಥಳ ದಲ್ಲಿ ರೀಪಿಲ್ಲೀಂಗ್ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಇದು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.