ಏಕಕಾಲಕ್ಕೆ ಜನಿಸಿದ್ದ ನಾಲ್ಕು ಮಕ್ಕಳು….

409

ಬಳ್ಳಾರಿ /ಬಳ್ಳಾರಿ :ಕಳೆದ ಶುಕ್ರವಾರ ಏಕಕಾಲಕ್ಕೆ ಜನಿಸಿದ್ದ ನಾಲ್ಕು ಮಕ್ಕಳು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿವೆ,ಇತ್ತೀಚೆಗೆ ಬಳ್ಳಾರಿ ತಾಲೂಕಿನ ಎಮ್ಮಿಗನೂರು ಗ್ರಾಮದ ಗುಂಡೂರು ಹುಲಿಗೆಮ್ಮ(26) ತನ್ನ ಎರಡನೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಳು, ಎರಡು ಗಂಡು ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದ ಹುಲಿಗೆಮ್ಮಗೆ ಜನಿಸಿದ ಮಕ್ಕಳು ಪ್ರೀ ಮೆಚ್ಯೂರ್ ಡಿಲೇವರಿ ಆದ ಪರಿಣಾಮ, ಮತ್ತು ಮಕ್ಕಳ ತೂಕ ಕಡಿಮೆಯಿದ್ದ ಪರಿಣಾಮ ನಾಲ್ಕು ಮಕ್ಕಳು ಕಳೆದ ರಾತ್ರಿ ವಿಮ್ಸ್ ನಲ್ಲಿ ಮೃತಪಟ್ಟಿವೆ, ವಿಮ್ಸ್ ವೈದ್ಯರು ಈ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಕ್ಕಳನ್ನು ಎನ್ಎಸ್ ಯುಐ ನಲ್ಲಿ ಇರಿಸಿ ಚಿಕಿತ್ಸೆ ನೀಡಿದ್ರೂ ಮಕ್ಕಳ ತೂಕ ಕಡಿಮೆ ಇದ್ದ ಪರಿಣಾಮ ಮಕ್ಕಳಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವೆ. ವೈದ್ಯರು ಸಾಕಷ್ಟು ಪ್ರಯತ್ನ ಪಟ್ಟರೂ ಮಕ್ಕಳನ್ನು ಉಳಿಸಿಕೊಳ್ಳಲು ವಿಫಲವಾಗಿದ್ದಾರೆ. ಈ ಮೂಲಕ ಎಕಕಾಲಕ್ಕೆ ಜನಿಸಿದ್ದ ನಾಲ್ಕು ಮಕ್ಕಳು ಬದುಕುಳಿಯದಿರುವುದು ವಿಪರ್ಯಾಸವಾಗಿದೆ. ನಾಲ್ಕು ಮಕ್ಕಳನ್ನಹ ಕಳೆದುಕೊಂಡ ಹುಲಿಗೆಮ್ಮ ಮನೆಯಲ್ಲೀಗ ಆಕ್ರಂದನ ಮುಗಿಲುಮುಟ್ಟಿದೆ‌