ಕೊಪ್ಪಳ:ಸಮೀಪದ ಗುಡ್ಲಾನೂರು ಏತ ನೀರಾವರಿ ಯೋಜನೆ ರೈತರಿಗೆ ಅನುಕೂಲವಾಗುವ ಬದಲಾಗಿ ಅನಾನುಕೂಲಗಳು ಹೆಚ್ಚಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿದೆ.
ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ನಿಮಿ೯ಸುತ್ತಿರುವ ಗೂಡ್ಲಾನೂರು ಏತ ನೀರಾವರಿ ಯೋಜನೆಯು ಸಂಪೂರ್ಣ ಕಳಪೆ ಕಾಮಗಾರಿಯಿಂದ ಕೂಡಿದ್ದು ಇದರ ಉಪಯೋಗ ರೈತರಿಗೆ ಸಿಗುವುದು ತುಂಬಾ ಅನುಮಾನ ಎನ್ನಬಹುದು.
ರೈತರು ಈ ಕಾಮಗಾರಿಯ ಬಗ್ಗೆ ಸಚಿವರು ಶಾಸಕರು ಸಂಸದರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು ಯಾರು ಇದರ ಬಗ್ಗೆ ಧ್ವನಿ ಎತ್ತದೆ ಇರುವದು ದುರಂತವೆ ಸರಿ.ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಪರಿಶೀಲನೆ ಮಾಡಬೇಕು.ಮತ್ತು ಗುಣಮಟ್ಟದ ಕೆಲಸವಾಗುವಂತೆ ಮಾಡಿ ಎಂದು ಗೂಡ್ಲಾನೂರು ಗ್ರಾಮದ ರೈತರು ಅಗ್ರಹಿಸಿದ್ದಾರೆ.