ಮಳೆಗಾಗಿ ಕಪ್ಪೆ ಮತ್ತು ಕತ್ತೆಗಳ ಮದುವೆ..

277

ತುಮಕೂರು : ಏನಪ್ಪ ಇಂಥ ಭೀಕರ ಬರ ಬಂತು ..ಕಳೆದ ನಾಲ್ಕೈದು ವರ್ಷ ಗಳಿಂದ ಬೀಕರ ಬರ ಎದುರಿಸುತ್ತಿರುವ ಜಿಲ್ಲೆಯ ಜನತೆಗೆ ದಿಕ್ಕು ತೋಚದ ದಯನೀಯ ಪರಿಸ್ಥಿತಿ ಎದುರಾಗಿದೆ.

ವರುಣನಿಗಾಗಿ ಪೂಜೆ ಹೋಮ ಹವನ ಮಾಟ ಮಂತ್ರ ಹೀಗೆ ಹತ್ತಾರು ರೀತಿಯಲ್ಲಿ ದೇವತಾ ಕಾಯ೯ಕ್ರಮಗಳಿಗೆ ಮೊರೆ ಹೊಕ್ಕರೂ ಮಳೆ ಮಾತ್ರ ಬರುತ್ತಿಲ್ಲ .
ಮಂತ್ತಿ ಮಹೋದಯರಾಗಿಯೂ ಕೂಡಾ ರೈತರ ಹಿತ ಹಾಗು ನಾಡಿನ ಸಮೃದ್ದಿಯ ಹಿತ ದೃಷ್ಟಿಯಿಂದ ಶಿರಾ ಶಾಸಕ ಹಾಗು ಜಿಲ್ಲಾ ಸಚಿವ ಟಿ ಬಿ ಜಯಚಂದ್ರ ಕೂಡಾ ಶ್ರೀ ನಿವಾಸ ಕಲ್ಯಾಣ ಮಾಡಿಸಿ ಮಳೆಗಾಗಿ ಪ್ರಾಥಿ೯ಸಿದರು.
ಇದೆಲ್ಲಾ ಇನ್ನೂ ಚಚೆ೯ ಯಲ್ಲಿ ಇರುವಾಗಲೇ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಜಯಮಂಗಲಿ ನದಿಯಲ್ಲಿ ಕಪ್ಪೆ ಮತ್ತು ಕತ್ತೆಗಳಿಗೆ ಮದುವೆ ಮಾಡುವ ಮೂಲಕ ಮಳೆರಾಯನ ಮೊರೆ ಹೊಕ್ಕಿರುವ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ.
ತಮಟೆ ನಗಾರಿ ಮಹಿಳೆಯರಿಂದ ಸೋಬಾನೆ ಪದ ಸೇರಿದಂತೆ ಶಾಸ್ತ್ರೊಕ್ತವಾಗಿ ಜಯಮಂಗಲಿ ನದಿಯಲ್ಲಿ ಮದುವೆ ಮಾಡಿ ಮುಗಿಸಿದ್ದಾರೆ ಆದರೂ ಮಳೆರಾಯ ಮಾತ್ರ ಭೂ ತಾಯಿಯ ಕಡೆ ಮುಖ ಮಾಡಿಲ್ಲ ಇನ್ನು ಒಲಿಯಲಿಲ್ಲ ಮಳೆರಾಯ ..!
ಕಳೆದ ಒಂದು ತಿಂಗಳ ಹಿಂಷ್ಟೆ ಪಾವಗಡದಲ್ಲಿ ಬಾಯಿ ಬಡಿದುಕೊಂಡು ಕೂಗಾಡಿ ಬಾ ಬಾರೊ ಮಳೆರಾಯ ಅಂದ್ರೂ ಬರಲಿಲ್ಲ ಕಪ್ಪೆ ಕತ್ತಗಳ ಮದವೆಗೂ ಜಗ್ಗಲಿಲ್ಲ ವರುಣ ಇನ್ನೇನು ಮಾಡಿ ಪ್ರಾಥ೯ ನೆ ಮಾಡಿದರೆ ಬರಬಹುದೆಂಬ ಚಿಂತೆಯಲ್ಲಿರುವ ರೈತ ಸಮುದಾಯಕ್ಕೆ ಸಕಾ೯ರ ಮೋಡ ಭಿತ್ತನೆ ಮಾಡ್ತಿವಿ ಅಂತ ಹೇಳ್ತಿದೆ ಇಲ್ಲಿ ಭಿತ್ತನೆ ಮಾಡಿದರೆ ಯಾವ ರಾಜ್ಯದಲ್ಲಿ ಮಳೆ ಬರುತ್ತೊ ಕಾದು ನೋಡಬೇಕಷ್ಟೆ