ಸ್ವಚ್ಛ ಭಾರತ ಮಿಷನ್ ಜಿ.ಪಂ ಅಧ್ಯಕ್ಷೆ ಆಯ್ಕೆ..

556

ಬಾಗಲಕೋಟೆ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ಕಾಶಪ್ಪನವರ್ ಅವರ ಕಾರ್ಯವೈಖರಿ ಕೇಂದ್ರ ಸರ್ಕಾರದ ಮನ ತಟ್ಟಿದೆ.ಸ್ವಚ್ಛ ಭಾರತ ಮಿಷನ್ ಪ್ರತಿನಿಧಿ ಯಾಗಿ ರಾಜ್ಯದಿಂದ ಆಯ್ಕೆಯಾಗಿದ್ದು. ಅಗಷ್ಟ 9ರಂದು ಹೈದರಾಬಾದಿನ ವಿಜಯ ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲೆಯ ಕಿರ್ತಿಹೆಚ್ಚಿಸಲಿದ್ದಾರೆ.

ಇನ್ನು ಬಾಗಲಕೋಟೆ ಜಿಲ್ಲೆಯ ಗ್ರಾಮಗಳನ್ನ ಬಯಲು ಶೌಚಮುಕ್ತ ಗ್ರಾಮಗಳನ್ನಾಗಿ ಮಾಡಲು ಪಣತೊಟ್ಟು ಗ್ರಾಮ ವಾಸ್ತವ್ಯಕ್ಕೆ ಅನಿಯಾದ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಪ್ರತಿ ಗ್ರಾಮವಾಸ್ತವ್ಯದುದ್ದಕ್ಕೂ ಗ್ರಾಮಗಳಲ್ಲಿ ಸ್ವಚ್ಚತೆ ಶುದ್ಧ ಪರಿಸರಕ್ಕೆ ಒತ್ತುನೀಡಿದ್ದು ಕೇಂದ್ರ ಸರ್ಕಾರದ ಗಮನ ಸೆಳೆಯುವಂತೆ ಮಾಡಿದೆ. ಒಟ್ಟಾರೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಗ್ರಾಮ ವಾಸ್ತವ್ಯ ಮಾಡಿ ಗ್ರಾಮಸ್ಥರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಜಿಲ್ಲಾಡಳಿತವನ್ನೆ ಗ್ರಾಮದತ್ತ ಕೊಂಡೊಯ್ದು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಥಳದಲ್ಲೆ ಅಧಿಕಾರಿಗಳಿಂದ ಪರಿಹಾರ ಕಲ್ಪಿಸಿಕೊಟ್ಟು ಜಿಲ್ಲಾಡಳಿತದಲ್ಲೆ ಹೊಸ ಅಲೆಯನ್ನ ಹುಟ್ಟುಹಾಕಿದ್ರು ಅಧ್ಯಕ್ಷೆ ವೀಣಾ ಕಾಶಪ್ಪನವರ್..