ಜನಪದ ಮತ್ತು ಸಾಂಸ್ಕೃತಿಕ ಕಲಾಮೇಳ…

342

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ:ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಮತ್ತು ಕಲಾ ಅಭಿವೃದ್ಧಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಡಾಲ್ಪಿನ್ ಎಜುಕೇಶನ್ ಟ್ರಸ್ಟ್ ವತಿಯಿಂದ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಪಿಂಡಿಪಾಪನಹಳ್ಳಿ ನಾಡೋಜ ಮುನಿವೆಂಕಟಪ್ಪ ಸಸಿಗೆ ನೀರು ಹಾಕಿ ತಮಟೆ ನುಡಿಸುವ ಮೂಲಕ ಉದ್ಘಾಟಿಸಿದರು.

ನಂತರ ಬಿಇಒ ರಘುನಾಥರೆಡ್ಡಿ ಮತ್ತು ಇಒ ವೆಂಕಟೇಶ್,ಕಸಾಪ ತಾಲ್ಲೂಕು ಅಧ್ಯಕ್ಷ ಕುಂದಲಗುರ್ಕಿ ಮಂಜುನಾಥ್ ಹಾಗೂ ಅಶೋಕ್ ಮುಂತಾದವರು ಜನಪದ ವಾದ್ಯಗಳನ್ನು ನುಡಿಸಿ ಮಾತನಾಡಿದರು.

ಜನಪದ ಮತ್ತು ಸಾಂಸ್ಕೃತಿಕ ಕಲಾ ಮೇಳದಲ್ಲಿ ಗೊರವರ ಕುಣಿತ, ತಮಟೆ, ಗಾಯನ, ಕೊಂಬು ಕಹಳೆ, ಅರೆವಾದ್ಯ, ಕೀಲುಕುದುರೆ, ಏಕಪಾತ್ರ ಅಭಿನಯ ಸೇರಿದಂತೆ ನೃತ್ಯಗಳನ್ನು ಪ್ರದರ್ಶಿಸಲಾಯಿತು.

ಬಿಸಿಲಿನಲ್ಲಿ ಶಾಲಾ ಮಕ್ಕಳು ಕಲಾ ಮೇಳವನ್ನು ವೀಕ್ಷಿಸಿ ಸಂಭ್ರಮಿಸಿದರು.
ಒಂದೇ ಕಲಾ ತಂಡವನ್ನು ಎರಡು ತಂಡಗಳಂತೆ ಪ್ರದರ್ಶಿಸಿದ್ದು ವಿಪರ್ಯಾಸವಾಗಿತ್ತು.

ಕೇವಲ 4 ಜನ ಕಲಾವಿದರನ್ನು ಒಂದು ತಂಡದಂತೆ ಪ್ರದರ್ಶಿಸಿದ್ದು ಶಾಲಾ ಮಕ್ಕಳು ಪ್ರತಿಭಾ ಕಾರಂಜಿಗಳಲ್ಲಿ ಕೆಲವು ನೃತ್ಯಗಳಿಗೆ 6 ಜನರನ್ನು ಸೀಮಿತಗೊಳಿಸುವಂತ ರೀತಿಯಲ್ಲಿ ಕೇವಲ 4 ಜನರ ತಂಡದ ತಂಡಗಳ ಕಲಾ ಮೇಳವಾಗಿತ್ತು.

ಸರ್ಕಾರದಿಂದ ಅನುದಾನ ಪಡೆದ ಕಲಾ ಸಂಸ್ಥೆಗಳೆ ಈ ರೀತಿ ಮಾಡಿದರೆ ಕಲಾವಿದರೆ ಬೇಲಿ ಎದ್ದು ಕಲೆಯನ್ನು ನುಂಗಿದಂತ್ತಿತ್ತು.

ಕಾರ್ಯಕ್ರಮದಲ್ಲಿ ಡಾಲ್ಪಿನ್ ಶಾಲೆಯ ಕಾರ್ಯದರ್ಶಿ ಅಶೋಕ್, ಲೋಕೇಶ್, ಶ್ರೀನಿವಾಸರೆಡ್ಡಿ ಹಾಗೂ ಶಾಲಾ ಸಿಬ್ಬಂದಿ ಕೀಲುಕುದುರೆ ನಾರಾಯಣಪ್ಪ ಮುಂತಾದವರು ಭಾಗವಹಿಸಿದ್ದರು.