ಅರಿಶಿಣ,ಕುಂಕುಮಕ್ಕೇನಾದರೂ ಹೋಗಿದ್ರಾ? ಅಧಿಕಾರಿಗಳು..

499

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ :ವರಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಲಾ ಕಾಲೇಜುಗಳು ಹೊರತು ಪಡಿಸಿ ಸರ್ಕಾರಿ ಕಛೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ. ಆದರೆ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿಗಳ ಕಛೇರಿಗೆ ಆಗಮಿಸದೆ ಖಾಲಿ ಕುರ್ಚಿಗಳು ಕಾಣುತ್ತಿರು ವಂತಹ ದೃಶ್ಯ ನಮ್ಮೂರು ವಾಹಿನಿಗೆ ಲಭ್ಯವಾಯಿತು.

ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಅಟೇಂಡರನ್ನು ಹೊರತು ಪಡಿಸಿ ಮತ್ತಾವುದೇ ಅಧಿಕಾರಿಗಳು ಕಛೇರಿಯಲ್ಲಿ ಕಾಣಿಸಲಿಲ್ಲ. ಇನ್ನು ಇದರ ಬಗ್ಗೆ ಸಂಬಂಧ ಪಟ್ಟ ಅಟೇಂಡರನ್ನು ವಿಚಾರಿಸಿದಾಗ ನಮಗೇನು ಗೊತ್ತಿಲ್ಲ ಎನ್ನುವಂತೆ ತಮ್ಮನಹಳ್ಳಿ ಪಂಚಾಯಿತಿ ಯಲ್ಲಿ ಕೆಲಸ ಮಾಡುವ ಅಟೇಂಡರ್ ತಿಳಿಸಿದರು.

ಆನೂರು ಗ್ರಾಮ ಪಂಚಾತಿಯಲ್ಲೂ ಸಹಾ ಅದೇ ರೀತಿ ಯಾವ ಅಧಿಕಾರಿಗಳು ಇರಲಿಲ್ಲಿ ಅಧಿಕಾರಿಗಳು ಯಾಕೆ ಬಂದಿಲ್ಲ ಎಂದು ವಿಚಾರಿಸಿದಾಗ ಹಬ್ಬಕ್ಕೆ ರಜಾ ಹಾಕಿದ್ದಾರೆ. ಈ ವಿಚಾರ ಹಿಂದಿನ ದಿನವೇ ತಿಳಿಸಿದ್ದಾರೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಒಳ ಪಡುವಂತ ಗ್ರಾಮಗಳ ಸಾರ್ವಜನಿಕರು ಹಬ್ಬದ ನಡುವೆಯು ಕೆಲಸಗಳಿಗೆ ಪಂಚಾಯಿತಿಗೆ ಬಂದರೆ ಅಧಿಕಾರಿಗಳು ಇಲ್ಲದಿರುವಂತ ಖಾಲಿ ಕುರ್ಚಿಗಳನ್ನು ನೋಡಿ ಭಾಗಿಲ ಬಳಿ ಕಾದು ಕಲಿತು ಕೊನೆಗೆ ವಾಪಸ್ಸು ತೆರಳವಂತ ದುಸ್ಥಿತಿ ನಿರ್ಮಾಣವಾಗಿತ್ತು.

ತಾಲ್ಲೂಕಿನ ಕಾರ್ಯ ನಿರ್ವಾಹಣಾಧಿಕಾರಿ ವೆಂಕಟೇಶ್ ರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದಾಗ ಅಧಿಕೃತವಾಗಿ ರಜೆ ನೀಡಿಲ್ಲ ತುಮ್ಮನಹಳ್ಳಿ ಮತ್ತು ಆನೂರು ಗ್ರಾಮ ಪಂಚಾಯಿತಿಯ ಪಿಡಿಒ ಸೇರಿದಂತೆ ಇತರೆ ಅಧಿಕಾರಿಗಳಿಗೆ ಯಾವುದೇ ರೀತಿಯ ರಜೆ ನೀಡಿಲ್ಲ. ಯಾರು ಸಹ ನನ್ನ ಅನುಮತಿ ಪಡೆದಿರುವುದಿಲ್ಲ ಇದರ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು.

ಒಟ್ಟಿನಲ್ಲಿ ಕಾಟಚಾರಕ್ಕೆ ಗ್ರಾಮ ಪಂಚಾಯಿತಿಗಳ ಬಾಗಿಲು ತೆರದಿದ್ದು ಒಳಗೆ ನೋಡಿದರೆ ಅಧಿಕಾರಿಗಳು ಇಲ್ಲದೆ ಖಾಲಿ ಕುರ್ಚಿಗಳು ಕಾಣುತ್ತಿದ್ದುದು ವಿಪರ್ಯಾಸವೇ ಸರಿ.