ರೈತರು ಕೂರಿಗೆ ಬಿತ್ತನೆಗೆ ಮುಂದಾಗಲು ಸಲಹೆ..

384

ಬಳ್ಳಾರಿ,/ಬಳ್ಳಾರಿ :ಜಾಗತಿಕ ತಾಪಮಾನ ಏರಿಕೆ ಗಿಡಮರಗಳ ನಾಶದಿಂದ ಮಳೆಗಾಲದ ಅಭಾವ ನೀರಿನ ಕೊರತೆ ಇದೆ. ಹೀಗಾಗಿ ರೈತರು ಬದುಕಬೇಕೆಂದರೆ ಕೂರಿಗೆ ಬಿತ್ತನೆ ಕಾರ್ಯಕ್ಕೆ ಮುಂದಾಗುವುದು ಒಳಿತು ಅಂತ ತುಂಗಭದ್ರಾ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಡಿ.ಜಿ.ಪುರುಷೋತ್ತಮಗೌಡ ಸಲಹೆ ನೀಡಿದ್ದಾರೆ.

ಬಳ್ಳಾರಿ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಈ ಮುಂಚೆ ಭತ್ತದ ಸಸಿ ಹಾಕಿ ನಾಟಿ ಮಾಡುವ ಪದ್ಧತಿ ಇತ್ತು. ಇದರಿಂದ ಸಮಯ, ಹಣ ಮತ್ತು ಶ್ರಮ ವ್ಯಯ ಆಗುತ್ತಿತ್ತು. ಕೂರಿಗೆ ಭತ್ತದ ಬೇಸಾಯ ಆರಂಭಿಸುವುದರಿಂದ ನೀರು ಸಮಯ, ಶ್ರಮ ಮತ್ತು ಹಣ ಉಳಿತಾಯ ಮಾಡಬಹುದು ಎಂದು ಸಲಹೆಗಳನ್ನು ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಉಪ ನಿರ್ದೇಶಕ ಶಿವನಗೌಡ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕ ಹುಸೇನ್ ಸಾಬ್, ತೋಟಗಾರಿಕಾ ಇಲಾಖೆ ಡಿಡಿ ಚಿದಾನಂದಪ್ಪ, ಎಓಗಳಾದ ಶಾಂತಲಾ, ನಾಗರಾಜಪ್ಪ ಮತ್ತು ಭೂ ಚೇತನದ ಆರ್ ಟಿ ಕೆ.ಗಂಗಾ ಅವರೊಂದಿಗೆ ತಾಲೂಕಿನ ಹೆಚ್ ಎಲ್ ಸಿ ಹಾಗೂ ಎಲ್ ಎಲ್ ಸಿ ಕಾಲುವೆ ಆಶ್ರಿತ ನೀರಾವರಿ ಪ್ರದೇಶಗಳಿಗೆ ತೆರಳಿ ಕೂರಿಗೆಯಿಂದ ಭತ್ತ ಬಿತ್ತನೆ ಮಾಡುವ ಪದ್ಧತಿಗೆ ಉತ್ತೇಜನ ನೀಡಿ ಇದೇರೀತಿ, ಜಿಲ್ಲೆಯ ರೈತರು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕೂರಿಗೆ ಭತ್ತದ ಇಳುವರಿ ನಾಟಿ ಮಾಡಿದ ಭತ್ತದ ಇಳುವರಿಯಷ್ಟೇ ಬರುತ್ತದೆ. ಕೆಲವೊಮ್ಮೆ ನಾಟಿ ಮಾಡಿದ ಭತ್ತಕ್ಕಿಂತ ಎಕರೆಗೆ ಸುಮಾರು ಒಂದರಿಂದ ಎರಡು ಕ್ವಿಂಟಾಲ್ ಹೆಚ್ಚು ಉತ್ಪಾದನೆ ಬರುತ್ತದೆ. ಸರ್ಕಾರ ಈ ಕುರಿತು ರೈತರಿಗೆ ಹೆಚ್ಚು ಹೆಚ್ವು ಪ್ರಚಾರ ಮಾಡಬೇಕು. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೂ ಸಹ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಮಳೆ ಇಲ್ಲದೇ ಕಂಗಾಲಾಗಿರುವ ರೈತರಲ್ಲಿ ಉತ್ತೇಜನ ತುಂಬಬೇಕೆಂದು ಮನವಿಯನ್ನೂ ಮಾಡಿದ್ರು