ಜನ್ಮದಿನೋತ್ಸವ ಹಾಗೂ ನೂತನ ಕಚೇರಿ ಉದ್ಘಾಟನೆ.

221

ಬಳ್ಳಾರಿ:ಕಂಪ್ಲಿ ಶಾಸಕ ಟಿಎಚ್ ಸುರೇಶ್ ಬಾಬು ಜನ್ಮ ದಿನಾಚರಣೆ ಹಾಗೂ ನೂತನ ಕಚೇರಿ ಉದ್ಘಾಟನೆ-ಜೇನುಗೂಡು ನಾವೆಲ್ಲ ಬೇರೆಯಾದರೆ ಏನಿಲ್ಲ-ಟಿಎಚ್ ಸುರೇಶ್ ಬಾಬು-ಬಾಬುಗೆ ಕೇಕ್ ತಿನ್ನಿಸಿ ಶುಭಾಶಯ ಸಲ್ಲಿಸಿದ ಅಭಿಮಾನಿ ವರ್ಗ

ಕಂಪ್ಲಿ ಕ್ಷೇತ್ರದ ಶಾಸಕ ಟಿಎಚ್ ಸುರೇಶ್ ಬಾಬು ಅವರ ಹುಟ್ಟು ಹಬ್ಬ ಹಾಗೂ ನೂತನ ಕಚೇರಿ ಉದ್ಘಾಟನೆ ಇಂದು ಬಳ್ಳಾರಿಯಲ್ಲಿ ಜರುಗಿತು.

ಶ್ರೀ ಕುಮಾರಸ್ವಾಮಿ ದೇವಸ್ಥಾನ ಬಳಿ ನೂತನವಾಗಿ ಆರಂಭವಾದ ಕಚೇರಿಯಲ್ಲಿ ಇಂದು ಬೆಳಿಗ್ಗೆಯಿಂದ ಹೋಮ, ಹವನ ಹಾಗೂ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಿದ ಶಾಸಕ ಬಾಬು ಅವರು ಅಪಾರ ಬಂಧುಗಳು, ಹಿತೈಷಿಗಳ ಸಮ್ಮುಖದಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು.

ಕಂಪ್ಲಿ ಕ್ಷೇತ್ರದ ಜನತೆ, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳ ಶುಭಾಶಯದ ಮಹಾಪೂರ ಬೆಳಿಗ್ಗೆಯಿಂದ ಹರಿದು ಬರುತ್ತಿದೆ.

ಮಾಜಿ ಸಂಸದರಾದ ಸಣ್ಣ ಫಕ್ಕಿರಪ್ಪ, ಜೆ.ಶಾಂತಾ, ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಜಿಪಂ ‌ಅಧ್ಯಕ್ಷೆ ದೀನಾ ಮಂಜುನಾಥ್, ಪಾಲಿಕೆ ಸದಸ್ಯರಾದ ಎಂ.ಗೋವಿಂದರಾಜುಲು, ಬಿಜೆಪಿ ಮುಖಂಡರಾದ ಡಾ.ಮಹಿಪಾಲ್, ಮೊಯಿನ್ ತಿಮ್ಮಾರೆಡ್ಡಿ ಉಪಸ್ಥಿತಿ ವಹಿಸಿದ್ದು ಶುಭಾಶಯ ಹೇಳಿದ್ರು.
ಕಂಪ್ಲಿ ಕ್ಷೇತ್ರವೂ ಸೇರಿದಂತೆ ಬಳ್ಳಾರಿ ಜಿಲ್ಲೆಯ ನಾನಾ ಭಾಗಗಳಿಂದ ಹತ್ತು ಸಾವಿರಕ್ಕೂ ಅಧಿಕ‌ ಜನ್ರು ಭಾಗವಹಿಸಿ ಶಾಸಕ ಬಾಬು ಅವರಿಗೆ ಅಭಿನಂಸಿದರು.
ಬೆಳಿಗ್ಗೆಯಿಂದ ಉಪಹಾರ ಮತ್ತು ಅಪರಾಹ್ನದಿಂದ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.
ಕಿಕ್ಕಿರಿದು ಸೇರಿದ್ದ ಜನಸ್ತೋಮದಿಂದ ಸುರೇಶ್ ಬಾಬು ಅವರಿಗೆ ಸಂಭ್ರಮ-ಸಂತೋಷ ಮನೆ‌ಮಾಡಿತ್ತು.
ಸಾರ್ವಜನಿಕರಿಗೆ ಅನುಕೂಲವಾಗಲು ದಿನದ ಇಪ್ಪತ್ತನಾಲ್ಕು ಗಂಟೆ ತಮ್ಮ ಕಚೇರಿ ತೆರೆದಿರುತ್ತದೆ. ಕಂಪ್ಲಿ ಕ್ಷೇತ್ರದ ಜನರು ಬಳ್ಳಾರಿಗೆ ಬಂದಾಗ ಕಚೇರಿ ಸೌಲಭ್ಯ ಪಡೆಯುವಂತೆ ಮನವಿ ಮಾಡಿದ್ರು.