ಕೆರೆ ಹಬ್ಬ ಆಚರಣೆ..

263

ಬೆಂಗಳೂರು/ಕೃಷ್ಣರಾಜಪುರ: ಬೆಳ್ಳಂದೂರು ರೈಸಿಂಗ್ ಮತ್ತು ಸ್ಥಳೀಯ ನಾಗರಿಕರು ಬೆಳ್ಳಂದೂರು ಕೆರೆ ಹಬ್ಬ ಆಚರಿಸುವ ಮೂಲಕ ಕೆರೆ ಸಂರಕ್ಷಣೆಯ ಜಾಗೃತಿಯನ್ನು ಸಾರ್ವಜನಿಕರಲ್ಲಿ ಮೂಡಿಸಿದರು. ಬೆಳ್ಳಂದೂರು ರೈಸಿಂಗ್ ವಿವಿಧ ಎನ್ಜಿಒ ಮತ್ತು ಖಾಸಗಿ ಸಂಸ್ಥೆಗಳ ಸಂಯುಕ್ತ ಅಶ್ರಯದಲ್ಲಿ ಹಮ್ಮಿಕೊಂಡಿದ್ದ ಬೆಳ್ಳಂದೂರು ಕೆರೆ ಹಬ್ಬದಲ್ಲಿ ಕೆರೆ ಪ್ರದೇಶ ಒತ್ತುವರಿ ತೆರವು, ವಸತಿ ಸಮುಚ್ಚಯ, ಕಾರ್ಖಾನೆಗಳು ಹಾಗು ಎಸ್ಟಿಪಿ ಪ್ಲ್ಯಾಂಟ್ಗಳಲ್ಲಿ ಸಂಸ್ಕರಿಸಿದ ನೀರಿನ ಗುಣಮಟ್ಟದ ಮಾಹಿತಿ ನಾಗರಿಕರಿಗೆ ಲಭ್ಯವಾಗುವಂತೆ ಆನ್ಲೈನ್ ಮೂಲಕ ಬಹಿರಂಗ ಪಡಿಸುವುದು, ಏರಿಯೇಟರ್ಸ್ ಅಳವಡಿಸಿ ಕೆರೆಯಲ್ಲಿ ಆಮ್ಲಜನಕವನ್ನು ಹೆಚ್ಚಿಸಬೇಕು, ಕೆರೆಯ ನೀರು ಸ್ವಚ್ಚತೆಯ ಹಿನ್ನೆಲೆ ಪಾಸ್ಫೇಟ್ಸ್ ಮತ್ತು ನೈಟ್ರೇಟ್ಸ್ ಸೇರದಂತೆ ಜೈವಿಕ ತಂತ್ರಜ್ಞಾನ, ವೆಟ್ಲ್ಯಾಂಡ್ ನಿರ್ಮಣದಂತಹ ಕ್ರಮಗಳು ಕೈಗೊಳ್ಳುವುದು. ಪ್ರತ್ಯೇಕವಾಗಿ ನಗರದಲ್ಲಿ ಪ್ರತಿಯೊಂದು ಕೆರೆಯ ರಕ್ಷಣೆಗೆ ಸ್ಥಳೀಯರನ್ನೊಳಗೊಂಡ ನಿರ್ವಹಣಾ ಸಮಿತಿ ರಚಿಸಿ ಪರಿಸರ ತಜ್ಞರನ್ನು ಸದಸ್ಯರನ್ನಾಗಿಸಿ ಕೆರೆಗಳ ರಕ್ಷಣಾ ಕ್ರಮಗಳನ್ನು ಜರುಗಿಸುವುದು ವರ್ಷಕ್ಕೊಮ್ಮೆ ಕೆರೆ ಕಣಿವೆಗಳಲ್ಲಿನ ಎಸ್ಟಿಪಿ ಪ್ಲ್ಯಾಂಟ್ಗಳ ಪರಿಶೀಲನೆ ನಡೆಸುವುದು ಸೇರಿದಂತೆ ಇನ್ನಿತರೆ ಕ್ರಮಗಳನ್ನು ಮುಂದಿನ ಸ್ವಚ್ಚತಾ ಹಂತದಲ್ಲಿ ಸರ್ಕಾರದ ಅಂಗ ಸಂಸ್ಥೆಗಳು ಅಳವಡಿಸಿಕೊಳ್ಳುವಂತೆ ನುರಿತ ತಜ್ಞರ ಸಮಿತಿಯ ಸದಸ್ಯರು ಹಾಗೂ ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳು ಸಾರ್ವಜನಿಕರ ಸಮ್ಮುಖದಲ್ಲಿ ಚರ್ಚಿಸಲಾಯಿತು. ಬೆಂಗಳೂರು ನಗರದ ದೂರದೃಷ್ಟಿಯಿಂದ ಹಿರಿಯರು ಕೆರಗಳನ್ನು ನಿರ್ಮಿಸಿದ ರು. ಆದರೆ ಕಾಲಕ್ರಮೇಣ ಕೆರಗಳು ಕಣ್ಮಾರೆಯಾಗಿವೆ ಅಲ್ಲದೆ ಕಲುಷಿತಗೊಳ್ಳುತ್ತಿವೆ. ವ್ಯರ್ಥವಾಗಿ ಪೋಲುವಾಗುವ ನೀರನ್ನು ಸಂಗ್ರಹಿಸಲು ಕೆರೆ ಕಾಲುವೆಗಳನ್ನು ನಿರ್ಮಿಸಿ ಸುಂದರ ನಗರವನ್ನು ಮುಂಬರುವ ಪೀಳಿಗೆಗೆ ಕೊಡುಗೆಯಾಗಿ ನೀಡಿದ್ದಾರೆ ಅದು ಇಂದು ಸಾರ್ವಜನಿಕರ ಅಸಡ್ಡೆ ಮತ್ತು ಸರ್ಕಾರದ ನಿರ್ಲಕ್ಷದಿಂದ ಕೆರೆಗಳು ಅವನತಿಗೆ ತಲುಪಿವೆ ಎಂದು ಬೆಳ್ಳಂದೂರು ಕೆರೆ ಅಭಿವೃದ್ದಿ ಸಮಿತಿ ಸದಸ್ಯ ಜಗದೀಶ್ ಬೇಸರ ವ್ಯಕ್ತಪಡಿಸಿದರು. ನಗರದಲ್ಲಿನ ಕೆರೆಗಳ ಕುರಿತು ಸಂಪೂರ್ಣ ಮಾಹಿತಿಯುಳ್ಳ ಚಿತ್ರಪಟಗಳು, ಮಕ್ಕಳಿಂದ ಪರಿಸರದ ನಾನಾ ಪರಿಕಲ್ಪನೆಯ ಚಿತ್ರ ವಿನ್ಯಾಸಗಳು, ಕಲಾವಿದನ ಕುಂಚದಲ್ಲಿ ಅರಳುತ್ತಿದ್ದ ಕೆರೆಯ ಚಿತ್ರ ವಿನ್ಯಾಸ ಪ್ರಮುಖವಾಗಿ ಕೆರೆ ಹಬ್ಬದಲ್ಲಿ ಕಂಡು ಬಂದವು. ಅಲ್ಲದೆ ಜೈವಿಕ ಆಹಾರ, ಸಿರಿಧಾನ್ಯಗಳು, ಆಯುರ್ವೇದ ಔಷದಿಗಳ ಮಳಿಗಳು ಸಹ ಇದ್ದವು. ಕೆರೆ ರಕ್ಷಣೆ ಸಾರ್ವಜನಿಕರ ಹೊಣೆಯೂ ಆಗಿದ್ದು, ಸರ್ಕಾರದೊಂದಿಗೆ ಕೈಜೋಡಿಸಿ ತಮಗೆ ಸಮರ್ಥವಾದ ಕೆರೆ ಸ್ವಚ್ಚತೆಯ ಕಾರ್ಯಗಳನ್ನು ನಡೆಸುವ ಮೂಲಕ ಕೆರೆಗಳ ಸಂರಕ್ಷಣೆ ಶ್ರಮಿಸಬೇಕೆಂದು ಕರೆ ನೀಡಲಾಯಿತ್ತು. ಈ ಸಂದರ್ಭದಲ್ಲಿ ನಮ್ಮ ಬೆಂಗಳೂರು ಫೌಂಡೇಷನ್ನ ಶ್ರೀಧರ್ ಪಬ್ಬಿಶೆಟ್ಟಿ, ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ, ಡಾ.ವಿಜಯ್ಕುಮಾರ್, ಎನ್.ಲಕ್ಷ್ಮಣ್, ಬಿ.ಡಿ.ಎ.ಅಧಿಕಾರಿ ಖಾನ್ ಬಿಬಿಎಂಪಿ ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್, ನಾಗೇಶ್, ರಾಮ್ ಪ್ರಸಾದ್ಸೇರಿದಂತೆ ಮತ್ತಿತರರಿದ್ದರು.