ಸ್ವಾಮೀಜಿಗೆ ಬಿಡುಗಡೆ ಭಾಗ್ಯ.

319

ಬಾಗಲಕೋಟೆ: ಡಿಸಿ ಕಚೇರಿಯಲ್ಲಿ ನಡೆದ ಧಾಂದಲೆ ಪ್ರಕರಣದಲ್ಲಿ ಬಂಧನವಾಗಿದ್ದ ಬಸವರಾಜ ದೇವರು ಸ್ವಾಮೀಜಿ ಅವರನ್ನ ಬಿಡುಗಡೆಗೊಳಿಸಲಾಯಿತು.ಬಿಡುಗಡೆ ಬಳಿಕ ಮಾತನಾಡಿದ ಅವರು ಡಿಸಿ ಕಚೇರಿ ಪ್ರಕರಣದ ಬಗ್ಗೆ ವಿಷಾಧ ವ್ಯಕ್ತಪಡಿಸುತ್ತೇನೆ. ಕುರುಬರ ಮೇಲಿನ ಪೋಲಿಸರ ದೌಜ೯ನ್ಯ ನೋಡಿ ಸುಮ್ಮನೆ ಕೂರಲಾಗಲಿಲ್ಲ, ಆದರೆ ನಾನು ತಪ್ಪು ಮಾಡಿಲ್ಲ ಎಂದ ಸ್ವಾಮೀಜಿ.ಕುರುಬರ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ದೇವರು ಬುದ್ದಿ ಕೊಡಲಿ, ಸೌಜನ್ಯ ಬರಲಿ.ಸಿಎಂ ಹತ್ತಿದ ಏಣಿಯನ್ನ ಮರೆಯಬಾರದು. ವಿಧಾನಸೌಧದಲ್ಲಿ ಕಂಬಳಿ ಬೀಸ್ತಾವ, ಭಂಡಾರ ಹಾರುತ್ತ, ಡೊಳ್ಳು ಕುಣಿಯುತ್ತೇ ಅಂದವನು ನಾನು.ಆಡಳಿತದ ಚುಕ್ಕಾಣಿ ಹಿಡಿದವರಿಂದ ಕುರುಬ ಸಮಾಜದ ಬಗ್ಗೆ ನಿಲ೯ಕ್ಷ್ಯ ಸರಿಯಲ್ಲ.ಈ ಬಗ್ಗೆ ಸಿಎಂ ಆತ್ಮವಲೋಕನ ಮಾಡಿಕೊಳ್ಳಲಿ. ಈ ವಗ೯ಕ್ಕೆ ನ್ಯಾಯ ಕೊಡಿಸಲಿ.ಕುರುಬ ಸಮುದಾಯ ಎಸ್ ಟಿ ಗೆ ಸೇರಿಸಿದರೆ ಸಿಎಂ ಮತ್ತೆ 25 ವಷ೯ ಸಿಎಂ ಆಗಿ ಮುಂದುವರಿತಾರೆ, ಆಗದೇ ಹೋದರೆ ಬೇರೆ ಇದೆ ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ರು.