ರಾಜ್ಯ ಬಿಜೆಪಿ ಮಹಿಳಾ ಉಪಾಧ್ಯಕ್ಷೆಗೆ ಜೀವ ಬೆದರಿಕೆ.!? ಡಿಸಿ ಗೆ ದೂರು

862

ರಾಜ್ಯ ಬಿಜೆಪಿಯ ಮಹಿಳಾ ಘಟಕದ ಉಪಾಧ್ಯಕ್ಷೆ ಯಿಂದ ಜೀವ ಬೇದರಿಕೆ ,ಡಿಸಿಗೆ ದೂರು

ಬಳ್ಳಾರಿ/ಬಳ್ಳಾರಿ:ರಾಜ್ಯ ಬಿಜೆಪಿಯ ಮಹಿಳಾ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತ ನನಗೆ ಜೀವ ಬೆದರಿಕೆ ಇದೆ ಎಂದು ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ವಿ. ಮನೋಹರ್ ಗೆ ದೂರು ನೀಡಿದ್ದಾರೆ.
ನನ್ನ ಸಹೋದರ ಸಂಬಂಧಿಗಳಿಂದ ನನಗೆ ಜೀವ ಬೆದರಿಕೆ ಇದೆ. ನನ್ನ ಸಹೋದರ ನಂದಾಸಿಂಗ್ ಮತ್ತು ಅಕ್ಕನ ಮಗ ನಿಖಿಲ್ ಸಿಂಗ್ ನನಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಸಾಕಷ್ಟು ಬಾರಿ ವಾರ್ನ್ ಕೂಡ ಮಾಡಿದ್ದಾರೆ. ಫೋನ್ ಮೇಸೆಜ್ ಗಳು ಅದಕ್ಕೆ ಸಾಕ್ಷಿ, ನಿನ್ನ ಮನೆ ಎದುರು ಹುಡುಗರು ಜಮಾಯಿಸಿದ್ದಾರೆ. ಅವರನ್ನು ಮಾತನಾಡಿಸು ನೋಡೋಣ ಎಂದು ಹೇಳಿ, ಬೆದರಿಕೆಯ ಸಂದೇಶಗಳನ್ನು ಹಾಕುವುದಲ್ಲದೇ, ಮನೆಗೆ ಬಂದು ಅಕ್ಕನ ಮಗ ನಿಖಿಲ್ ಗಲಾಟೆ ಮಾಡಿದ್ದಾನೆ. ನನಗೆ ಜೀವಭಯವಿದೆ ಎಂದು ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ವಿ.ಮನೋಹರ್ ಗೆ ಮನವಿ ಸಲ್ಲಿಸಿದರು. ಈ ಕುರಿತು ನಾನು ಜಿಲ್ಲಾ ಎಸ್ಪಿ ಆರ್.ಚೇತನ್ ಅವರಿಗೂ ಸಹ ದೂರು ನೀಡುತ್ತೆನೆ ಎಂದು ಹೇಳಿದ ಅವರು, ಸಾಕಷ್ಟು ವರ್ಷಗಳಿಂದ ನಾನು ಚಿತ್ರ ಹಿಂಸೆ ಅನುಭವಿಸುತ್ತಿದ್ದೇನೆ. ಈ ಹಿಂದೆಯೂ ಕೂಡ ನನ್ನನ್ನು ನನ್ನ ಹೊಸಪೇಟೆಯ ಮನೆಯಲ್ಲಿ ಕೂಡಿ ಹಾಕಿ ಆಸ್ತಿ ಬರೆಸುಕೊಂಡಿದ್ದಾರೆ ಎಂದು ಹೇಳಿದರು.

ಬೈಟ್- ೧-೨- ರಾಣಿ ಸಂಯುಕ್ತ, ಬಿಜೆಪಿಯ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ. ಹೊಸಪೇಟೆ.