ಪ್ಲಾಸ್ಟಿಕ್ ಮುಕ್ತ ಹಂಪಿಗೆ ಚಾಲನೆ-ಪ್ರಸಿದ್ಧ ಸ್ಮಾರಕಗಳ ಬಳಿ ಸ್ವಚ್ಛತೆ…

259

ಬಳ್ಳಾರಿ /ಹೊಸಪೇಟೆ:ಐತಿಹಾಸಿಕ ಹಂಪಿಯಲ್ಲಿ ಗೈಡ್ ಮಾಡುವುದರಲ್ಲಿ ಸದಾ ಬ್ಯೂಸಿಯಾಗಿರುತ್ತಿದ್ದ ಪ್ರವಾಸಿ ಮಾರ್ಗದರ್ಶಕರು, ಹಂಪಿಯ ಪ್ರಸಿದ್ಧ ಸ್ಮಾರಕಗಳ ಬಳಿ ಮಂಗಳವಾರ ಸಚ್ಛತೆ ಕಾರ್ಯ ನಡೆಸಿದರು.

ಪ್ಲಾಸ್ಟಿಕ್ ಮುಕ್ತ ಹಂಪಿಗೆ ಸಂಕಲ್ಪ ಗೈದ ಹಂಪಿ ಪ್ರವಾಸಿ ಮಾರ್ಗದರ್ಶಕರು, ಸ್ಮಾರಕಗಳ ಬಳಿ ಪ್ರವಾಸಿಗರು ಎಲ್ಲಂದರಲ್ಲಿ ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸಿದರು.

ವಿಜಯ ವಿಠ್ಠಲ ದೇವಸ್ಥಾನ ಹಿಂಭಾಗ ಹಾಗೂ ಸಾಲು ಮಂಟಪದೂದಕ್ಕೂ ಮಾರ್ಗದಶಿಗಳು ಸ್ವಚ್ಚತೆ ನಡೆಸಿ, ಪ್ರವಾಸಿಗರಿಗರಲ್ಲಿ ಜಾಗೃತಿ ಮೂಡಿಸಿದರು.

ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಹಂಪಿಯ ಐತಿಹಾಸಿಕ ಸ್ಮಾರಕಗಳ ಸೊಬಗನ್ನು ಸವಿಯಲು ಆಗಮಿಸುತ್ತಿದ್ದು, ಜತೆ ಜತೆಯಲ್ಲಿ ಹಲವಾರು ದಿನಿಸಿಗಳನ್ನು ತರುವುದು ಸಾಮಾನ್ಯ. ಹಂಪಿಯ ಬಹುತೇಕ ದೇವಾಲಯ ಹಾಗೂ ಸ್ಮಾರಕಗಳ ಬಳಿಯಲ್ಲಿ ಕಸದ ತೊಟ್ಟಿಗಳಿದ್ದರು, ಕೆಲವರು ಕಸದ ತೊಟ್ಟಿಗಳಿಗೆ ತಿಂದ ದಿನಿಸಿ ತ್ಯಾಜ್ಯವನ್ನು ಸ್ಮಾರಕಗಳ ಬಳಿಯಲ್ಲಿ ಎಸೆದು ಹೋಗುತ್ತಾರೆ. ಇದನ್ನು ಅರಿತ ಹಂಪಿ ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸಿಗಳಿಗೆ ಸ್ವಚ್ಚತೆಯ ಜಾಗೃತಿ ಜತೆಗೆ ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದು ಕಸದ ಬುಟ್ಟಿಗೆ ಹಾಕುತ್ತಿರುವುದು, ಪ್ರವಾಸಿಗರಿಗೆ ಮುಜುಗರ ತಂದಿದೆ. ಕಳೆದ ವಾರದಿಂದ ಹಂಪಿ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದ್ದು, ಪ್ರವಾಸಿಗರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಸಿಕ್ಕಾಪಟ್ಟೆ ಬ್ಯೂಸಿ ಇರಬೇಕಾಗಿರುವ ಪ್ರವಾಸಿ ಮಾರ್ಗದರ್ಶಿಗಳು, ಸ್ವಚ್ಚತೆಗೆ ಆದ್ಯತೆ ತೋರುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹಂಪಿ ಪ್ರವಾಸಿ ಮಾರ್ಗದರ್ಶಿಗಳು ಸ್ವಯಂ ಪ್ರೇರಣೆಯಿಂದ ಸ್ಮಾರಕಗಳ ಸ್ವಚ್ಚತೆ ಜಾಗೃತಿ ಹಾಗೂ ಪ್ಲಾಸ್ಟಿಕ್ ತೆರವು ಕಾರ್ಯ ನಡೆಸುತ್ತಿದೇವೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಪುರಾತತ್ವ ಪ್ರಾಧಿಕಾರದ ಗಮನಕ್ಕೆ ತಂದು ಅವರ ಸಹಕಾರದಿಂದ ನಿರಂತರ ಹಂಪಿ ಸ್ಮಾರಕಗಳ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಮುಂದಾಗಲಾಗುವುದು ಜತೆಗೆ ಪ್ರವಾಸಿಗರಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹಿರಿಯ ಪ್ರಾಸಿ ಮಾರ್ಗದರ್ಶಿ ಪರಶುರಾಮ ಹೇಳಿದರು.