ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಹಣ ದುರುಪಯೋಗ…

325

ಚಿಕ್ಕಬಳ್ಳಾಪುರ:ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್ ಗಳು ಮತ್ತು ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಹಣ ಏಳು ಕೋಟಿ ದುರುಪಯೋಗ.

ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗಕ್ಕೆ ಸಾವಿರಾರು ಕೋಟಿ ರೂಗಳನ್ನ ಮೀಸಲಿಟ್ಟಿದೆ.ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಣ ಅದಿಕಾರಿಗಳ ದುರುಪಯೋಗದಿಂದ ಇವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಸಮಾಜ ಕಲ್ಯಾಣ ಇಲಾಖೆಯ ಕಾಮಗಾರಿಗಳು ನಿರ್ಮಿತ ಕೇಂದ್ರದಿಂದ ನಿರ್ಮಾಣವಾಗುತ್ತಿವೆ…ಈ ಇಲಾಖೆಯ ಹಾಸ್ಟಲ್ ಗಳ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಏಳು ಕೋಟಿ ರೂಗಳು ದುರುಪಯೋಗ ಆಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ಬಾಲಕುಂಟಹಳ್ಳಿ ಗಂಗಾಧರ ಆರೋಪಿಸಿದ್ದಾರೆ..ತಾಕತ್ತಿದ್ದರೆ ಎಸ್ಸಿ ಎಸ್ಟಿ ಹಣವನ್ನ ದುರುಪಯೋಗ ಮಾಡಿಕೊಂಡಿರುವವರ ಮೇಲೆ ಕೇಸ್ ಗಳನ್ನು ಹಾಕಲಿ ಅದು ಬಿಟ್ಟು ಸಂಘಟನೆಯ ನಾಯಕರುಗಳ ಮೇಲೆ ಕೇಸ್ ಗಳನ್ನು ಹಾಕುವುದಲ್ಲ. ಜಿಲ್ಲಾಡಳಿತ ಮತ್ತು ರಾಜಕೀಯ ಜನಪ್ರತಿನಿದಿಗಳಿಂದ ದಲಿತ ನಾಯಕರುಗಳ ದಮನ ಮಾಡಲು ಹೊರಟಿದ್ದಾರೆಂದು ಆರೋಪಿಸಿದರು..

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ