ಅಭಿನಂಧನಾ ಸಮಾರಂಭ…

299

ಮಂಡ್ಯ/ಮಳವಳ್ಳಿ: ವಿಶ್ವಶಾಂತಿ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ನಾಡಿಗೆ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿವೃತ ಲೋಕಾಯುಕ್ತ ಎನ್.ಸಂತೋಷಹೆಗಡೆ, ನಿವೃತ್ತ ಎಸಿಪಿ ಬಿ.ಬಿ ಆಶೋಕಕುಮಾರ್, ತಿಥಿ ಚಿತ್ರ ಕಲಾವಿಧ ಗಡ್ಡಪ್ಪರವರಿಗೆ ಅಭಿನಂದನಾ ಸಮಾರಂಭ ಹಾಗೂ ಪರಿವರ್ತನಾ ಮಾಸ ಪತ್ರಿಕೆ ಬಿಡುಗಡೆ ಸಮಾರಂಭ ಮಳವಳ್ಳಿ ತಾಲ್ಲೂಕಿನ ಬೋಸೆಗೌಡನದೊಡ್ಡಿ ಗ್ರಾಮದಲ್ಲಿ ನಡೆಯಿತು.

ಕಾಯ೯ಕ್ರಮ ವನ್ನು ಶಾಸಕ ಪಿ.ಎಂ ನರೇಂದ್ರಸ್ವಾಮಿ ಉದ್ಘಾಟಿಸಿದರು.ಅಭಿನಂದನಾ ಸ್ವೀಕರಿಸಿದ ನಿವೃತ್ತ ಲೋಕಾಯುಕ್ತ ಎನ್. ಸಂತೋಷ ಹೆಗಡೆ ಮಾತನಾಡಿ, ಭ್ರಷ್ಟಚಾರ ನಿರ್ಮೂಲನೆ ಯಾಗುವರೆಗೂ ದೇಶ ಅಭಿವೃದ್ಧಿ ಯಾಗುವುದಿಲ್ಲ, ಸಧ್ಯದಲ್ಲೇ ಭ್ರಷ್ಟಚಾರಕ್ಕೆ ಅಂತ್ಯ ಕಾಣಲಿದೆ ಎಂದರು. ನಿವೃತ್ತ ಎಸಿಪಿ ಆಶೋಕಕುಮಾರ್ , ದೇಶದಲ್ಲಿರುವ ಜನರು ಪರಿವರ್ತನೆಯಾಗಬೇಕಿದೆ ಆಗ ಮಾತ್ರ ದೇಶ ಅಭಿವೃದ್ಧಿ ಸಾಧ್ಯ ಎಂದರು. ಕಾಯ೯ಕ್ರಮ ದಲ್ಲಿ ವಿಶ್ವಶಾಂತಿ ಪ್ರತಿಷ್ಠಾನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವಿದ್ಯಾನಂದ ತೀರ್ಥರು , ಗಡ್ಡಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್, ಶಾಸಕ ಪಿ.ಎಂ ನರೇಂದ್ರಸ್ವಾಮಿ , ತಾ.ಪಂ ಸದಸ್ಯರಾದ ನಾಗೇಶ್,ಸುಂದರೇಶ್, ಚೊಟ್ಟನಹಳ್ಳಿ ಗ್ರಾ.ಪಂ ಅದ್ಯಕ್ಷ ರಾಜು,ಮಹದೇಶ, ರಮೇಶಬೋಪಯ್ಯ, ಸೇರಿದಂತೆ ಮತ್ತಿತ್ತರರು ಇದ್ದರು