ವಿದ್ಯಾರ್ಥಿ ವಸತಿ ನಿಲಯಕ್ಕೆ ಅಧಿಕಾರಿಗಳ ಭೇಟಿ,ಪರಿಶೀಲನೆ

348

ಚಿಕ್ಕಬಳ್ಳಾಪುರ/ಚಿಂತಾಮಣಿ: ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿ ಕೆ.ರಾಗುಟ್ಟಹಳ್ಳಿ ಸಾರ್ವಜನಿ ಬಾಲಕರ ವಿಧ್ಯಾರ್ಥಿ ನಿಲಯದಲ್ಲಿ ಬುಧವಾರ ರಾತ್ರಿ ಕಲುಷಿತ ಆಹಾರ ಸೇವನೆ ಮಾಡಿದ ಅಡುಗೆ ಸಹಾಯಕ ಸೇರಿ ಇಪ್ಪತ್ತು ಮಂದಿ ವಿಧ್ಯಾರ್ಥಿಗಳು ಅಸ್ಥವ್ಯಸ್ಥ ಆದ ಘಟನೆ ನಡೆದಿದೆ.

ಕಲುಷಿತ ಆಹಾರ ಸೇವನೆ ಮಾಡಿ ಆಸ್ಪತ್ರೆ ಗೆ ದಾಖಲಾದವರನ್ನು ವಿಧ್ಯಾರ್ಥಿಗಳು ಬಾಬು,ಪ್ರದೀಪ್ ಶಶಿದರ್,ಆದರ್ಶ,ಆಜೇಯ್ ಕುಮಾರ್, ಸುಂದರರಾಜ್ ,ದಿಲೀಪ್, ಚಿಕ್ಕರೆಡ್ಡಪ್ಪ,ಅಜೇಯ,ಕಿರಣ,ಪ್ರಕಾಶ್ ,ಶಿವಕುಮಾರ್, ನಂದಕಿಶೋರ್ ಮತ್ತು ಪ್ರವೀಶ್ ಹಾಗೂ ಅಡುಗೆ ಸಹಾಯಕ ಬಾಲಾಜಿ ಸಿಂಗ್ ಎಂದು ತಿಳಿದು ಬಂದಿದ್ದು ವಿಧ್ಯಾರ್ಥಿ ನಿಲಯದಲ್ಲಿ ಸರಕಾರಿ ಪ್ರೌಢ ಶಾಲೆ,ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮತ್ತು ಎಸ್.ಎಲ್.ಎನ್.ಶಾಲೆಗೆ ಸೇರಿದ ಒಟ್ಟು ನೂರಹತ್ತು ಮಂದಿ ವಿಧ್ಯಾರ್ಥಿಗಳಿದ್ದು ರಾತ್ರಿ ಅನ್ನ ಮತ್ತು ಸಾಂಬಾರ್ ಊಟ ಮಾಡಿದ್ದಾರೆ.
ಈ ಪೈಕಿ ವಿವಿಧ ತರಗತಿಗಳ ಇಪ್ಪತ್ತು ಮಂದಿ ವಿಧ್ಯಾರ್ಥಿಗಳು ಹಾಗೂ ಅಡುಗೆ ಸಹಾಯಕ ಸೇರಿ ಇಪ್ಪತೊಂದು ಮಂದಿಗೆ ಬುಧವಾರ ಬೆಳಿಗಿನ ಜಾವ ನಾಲ್ಕುಗಂಟೆ ಯಿಂದ ಒಬ್ಬೊಬ್ಬರಿಗೆ ವಾಂತಿ,ಬೇದಿ,ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬೆಳಿಗ್ಗೆ 7-30ರ ನಂತರ ವಾಂತಿ, ಭೇದಿ, ಮತ್ತು ಹೊಟ್ಟೆ ನೋವು ಏರಿಕೆಯ ಸಂಖ್ಯೆ ಹೆಚ್ಚಾದ ಕೂಡಲೇ ವಿಷಯ ತಿಳಿದ ಕೆಲ ಶಿಕ್ಷಕರು ಮತ್ತು ಅಡುಗೆಯವರೇ ಎಲ್ಲರನ್ನು ಅಟೋ ಮತ್ತಿತರ ವಾಹನಗಳಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು ಎಲ್ಲರೂ ಚೇತರಿಸಿಕೊಂಡಿದ್ದಾರೆ.
ವಿಷಯ ತಿಳಿದ ಕೂಡಲೇ ತಾಲ್ಲೂಕು ಅರೋಗ್ಯಧಿಕಾರಿ ಡಾ.ರಾಮಚಂದ್ರ ರೆಡ್ಡಿ, ತಾಲ್ಲೂಕು ಅರೋಗ್ಯ ನಿರೀಕ್ಷಕ ಶ್ರೀ ನಿವಾಸರೆಡ್ಡಿ ಆಸ್ಪತ್ರೆ ಯಲ್ಲಿ ದಾಖಲಾದ ರೋಗಿಗಳ ವಿಚಾರಣೆ ನಡೆಸಿದ ನಂತರ ಕೆ. ರಾಗುಟ್ಟಹಳ್ಳಿ ವಸತಿ ನಿಲಯಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ತೇಜಾನಂದ ರೆಡ್ಡಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶಾಂತಮ್ಮರವರು ಹಾಸ್ಟೆಲ್ ಗೆ ಬೇಟಿ ಪರಿಶೀಲನೆ ನಡೆಸಿದ ನಂತರ ಹಾಸ್ಟೆಲ್ ಅಡುಗೆ ಮಹಿಳಾ ಸಿಬ್ಬಂದಿಯವರ ನಡುವೆ ವೈಮನಸ್ಯದಿಂದ ಶುಚಿತ್ವದ ಕೊರತೆಯಿರುವುದರಿಂದಲೇ ಈ ಅವಘಡ ನಡದಿದೆ ಎಂಬುದನ್ನು ಪತ್ತೆ ಹಚ್ಚಿರುವ ಅಧಿಕಾರಿಗಳು ಅವರನ್ನು ಇಲ್ಲಿಂದ ವರ್ಗಾವಣೆಗೆ ಶಿಫಾರಸ್ಸು ಮಾಡಿದ್ದಾರೆ.

ವರದಿ: ಇಮ್ರಾನ್ ಖಾನ್
ನಮ್ಮೂರು ಟಿವಿ, ಚಿಂತಾಮಣಿ.