ಬೆಳ್ಳಿ ಪಲ್ಲಕ್ಕಿಯ ರಥ ಮೆರವಣಿಗೆ.

473

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಸವಿತಾ ಸಮಾಜ ಸಂಘದ ವತಿಯಿಂದ 3ನೇ ಶ್ರಾವಣ ಶನಿವಾರ ಅಂಗವಾಗಿ ಶ್ರೀ ಕೋಟೆ ಆಂಜಿನೇಯಸ್ವಾಮಿ ದೇವರ ಮೆರವಣಿಗೆ ಬೆಳ್ಳಿ ಪಲ್ಲಕ್ಕಿಯ ರಥ

ನಗರದ ಉಲ್ಲೂರು ಪೇಟೆಯಿಂದ ಮೆರವಣಿಗೆ ಮಾಡುವ ಮೂಲಕ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರಾವಣ ಶನಿವಾರ ಆಚರಿಸಿದರು.

ಸುಮಾರು 40 ವರ್ಷಗಳಿಂದ ಪೂರ್ವಿಕರು ಆಚರಿಸಿಕೊಂಡು ಬಂದ ಶ್ರೀ ಕೋಟೆ ಆಂಜಿನೇಯಸ್ವಾಮಿ ಉತ್ಸವ ಬಯಲು ಅದ್ದೂರಿಯಿಂದ ಈ ವರ್ಷವು ಸಹ ಸವಿತಾ ಸಮಾಜದ ಮುಖಂಡರು ಹಾಗೂ ಯುವಕರು, ಭಕ್ತಾದಿಗಳು ಸೇರಿದಂತೆ ಮಂಗಳ ವಾದ್ಯಗಳೊಂದಿಗೆ ಸಂಭ್ರಮದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜ ಸಂಘದ ಅಧ್ಯಕ್ಷ ಎಚ್. ನಾರಾಯಣಸ್ವಾಮಿ, ಮಾಜಿ ಅದ್ಯಕ್ಷರಾದ ಎ.ವೈ ನಾಗಪ್ಪ, ಮುನಿಕೃಷ್ಟಪ್ಪ, ಖಜಾಂಚಿ ಟಿ. ದೇವರಾಜ್, ಕಾರ್ಯದರ್ಶಿ ಬೆಳ್ಳೂಟಿ ರಮೇಶ್, ತಾಲ್ಲೂಕು ಪ್ರತಿನಿಧಿ ಎಂ. ವೆಂಕಟೇಶ್, ಯುವ ಮುಖಂಡ ಆರ್. ಚಂದ್ರು, ಕುಮಾರ್ ಕೃಷ್ಣ, ವೆಂಕಟೇಶ್, ರಾಮಕೃಷ್ಣ ಹಾಗೂ ಮುಂತಾದವರು ಭಾಗವಹಿಸಿದ್ದರು.