ಕಾಮಗಾರಿಯೇ ಮುಗಿಸಿಲ್ಲಾ..

255

ತುಮಕೂರು/ಶಿರಾ: ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದ ಮೇಲೆ ಜಲ್ಲಿ ಮತ್ತು ಮರಳು ರಾಶಿ ಜೀವ ಭಯ ದಿಂದ ಶಾಲೆಯ ಕೊಠಡಿಯಲ್ಲಿ ಕುಳಿತು ಕೊಳ್ಳವ ಮಕ್ಕಳು

ಶಿರಾ ತಾಲೂಕಿನ ಕರೆಕಲ್ಲಹಟ್ಟಿ ಗ್ರಾಮದ ಶಾಲೆಗೆ 2011-12 ನೇ ಸಾಲಿನಲ್ಲಿ ನೂತನ ಕಟ್ಟಡ ಮಂಜೂರಾಗಿತ್ತು ಗುತ್ತಿಗೆಪಡೆದವರು ಮಾತ್ರ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಉಳಿದ ಮರಳು,ಜಲ್ಲಿ ಎಲ್ಲಂದರಲ್ಲೆ ಬಿಟ್ಟು ,ಮಳೆ ನೀರು ಸರಾಗವಾಗಿ ಹೋಗಲು ದೋಣಿ ಬಾಯಿಗೆ ಪೈಪ್ ಸಹ ಹಾಕದೆ ಕಳಪೆ ಕಾಮಗಾರಿ ಮಾಡಿ ಹಣ ಪೀಕಿದ್ದಾನೆ ಎಂಬ ಆರೋಪವಿದೆ. ಅಲ್ಲದೆ ಮೇಲ್ಛಾವಣಿಗೆ ಹೆಂಚು ಹಾಕಲು ಜಲ್ಲಿ ಮತ್ತು ಮರಳು ರಾಶಿ ಹಾಕಿ ವರ್ಷವೇ ಕಳೆದಿದೆ. ಆದರೆ ಇದುವರೆಗೂ ಕಾಮಗಾರಿ ಮಾಡಿಲ್ಲ. ಮಳೆ ಬಂದರೇ ಮಕ್ಕಳು ಜೀವಭಯದಿಂದ ಕುಳಿತು ಕೊಳ್ಳುವಂತ ಪರಿಸ್ಥಿತಿ ಎದುರಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿದ್ದು ಕುರುಡುರಂತೆ ವರ್ತಿಸುತ್ತಿರುವುದರ ಹಿಂದೆ ಸ್ಥಳೀಯರಿಗೆ ಹಲವು ಅನುಮಾನ ಮೂಡುತ್ತಿವೆ .