ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ.

256

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ದೊಡ್ಡ ಬೊಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಉಚಿತ ಸೈಕಲ್ ವಿತರಣೆ ಕಾರ್ಯಕ್ರಮವನ್ನು ಮಾನ್ಯ ಶಾಸಕರು ಜೆ.ಕೆ .ಕೃಷ್ಣಾ ರೆಡ್ಡಿ ರವರು ಉದ್ಘಾಟನೆ ಮಾಡುವ ಮುಖಾಂತರ ಉಚಿತ ಸೈಕಲ್ ವಿತರಣೆ ಮಾಡಿದರು.

2017-18 ನೇ ಸಾಲಿನ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಕ್ಷೇತ್ರದ ಮಾನ್ಯ ಶಾಸಕರದ ಕೃಷ್ಣಾ ರೆಡ್ಡಿ ಉಚಿತ ಸೈಕಲ್ ವಿತರಣೆ ಮಾಡಿದರು.
ಈ ವೇಳೆ ದೊಡ್ಡ ಬೊಮ್ಮನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳೊಂದಿಗೆ ಬಿಸಿ ಊಟ ಸೇವಿಸಿದ ಚಿಂತಾಮಣಿ ಕ್ಷೇತ್ರದ ಶಾಸಕರಾದ ಜೆ.ಕೆ ಕೃಷ್ಣಾ ರೆಡ್ಡಿ.

ಈ ಸಂದರ್ಭದಲ್ಲಿ ರೇಖಾ,ವೆಂಕಟರೆಡ್ಡಿ, ಮಳಪಲ್ಲಿ ಶಿವಣ, ನಗರಸಭೆ ಸದಸ್ಯರಾದ ಷಫೀಕ್ ಅಹ್ಮದ್, ವೇಣು, ಶಿವು, ಗೋಪಾಲ ಕೃಷ್ಣ, ನಾರಾಯಣ ಸ್ವಾಮಿ, ಕದೀರಪ್ಪ,ಜಯರಾಂ, ನಾಗೇಂದ್ರ ಬಾಬು, ರಾಜ್ ಕುಮಾರ್, ,ಮತ್ತು ಶಾಲೆಯ ಶಿಕ್ಷಕರು, ಹಾಗೂ ವಿದ್ಯಾರ್ಥಿಗಳು, ಶಾಲೆ ಮಕ್ಕಳ ಪೋಷಕರು ಮುಂತಾದವರು ಉಪಸ್ಥಿತಿಯಿದ್ದರು.

ಇಮ್ರಾನ್ ಖಾನ್ ನಮ್ಮೂರ ಟಿವಿ ಚಿಂತಾಮಣಿ.