ಭಾರಿ ಮಳೆಗೆ ಶಿಥಿಲಗೊಂಡ ಶಾಲೆ ಗೋಡೆಗಳು…

452

ಮಂಡ್ಯ/ಮಳವಳ್ಳಿ: ಸರ್ಕಾರಿ ಶಾಲೆಯೊಂದು ಕಳೆದ ರಾತ್ರಿ ಬಿದ್ದ ಭಾರೀ ಮಳೆಯಿಂದ ಶಿಥಿಲ ವ್ಯವಸ್ಥೆ ಯಿಂದ ಕೂಡಿದ್ದು ಕೂಡಲೇ ಸರಿಪಡಿಸಬೇಕು ಇಲ್ಲದಿದ್ದರೆ ಬೀದಿಗೆ ಇಳಿದು ಹೋರಾಟ ಮಾಡಲಾಗುವುದು ಎಂದು ಮಳವಳ್ಳಿ ಪಟ್ಟಣದ ಆಶೋಕನಗರ ಯುವಕರು ಒತ್ತಾಯಿಸಿದ್ದಾರೆ.

40 ವರ್ಷದ ಹಳೆಯ ಕಟ್ಟಡದಲ್ಲಿ ಶಾಲಾಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳು ಪ್ರಾಣವನ್ನು ಕೈಯಲ್ಲಿ ಇಟ್ಟುಕೊಂಡು ಪಾಠಕೇಳುವ ಪರಿಸ್ಥಿತಿ ಬಂದಿದೆ. ಇನ್ನೂ ಬಿಸಿಯೂಟದ ಅಡಿಗೆಯಂತೂ ಬಿರುಕುಗೊಂಡಿದ್ದು, ಇದು ಒಂದು ಕಳಪೆಕಾಮಗಾರಿಯಾಗಿದೆ ಇನ್ನೂ ಇಲ್ಲಿನ ಶೌಚಾಲಯವನ್ನು ನೋಡಿದರೆ ಮಕ್ಕಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಬಂದಿದ್ದು, ಇಲ್ಲಿ ಮೂತ್ರ ಹೊರಹೋಗುವುದಕ್ಕೆ ಯಾವುದೇ ಸಂಪರ್ಕ ಮಾಡದೆ ಇರುವುದು ಕಂಡುಬಂದಿದ್ದು, ಇನ್ನೂ ಮಳೆ ಬಂದರೆ ಶಾಲಾ ಆವರಣದಲ್ಲಿ ನೀರು ಮಾಯವಾಗಿ ಮಕ್ಕಳು ತಿರುಗಾಡಲು ಸಾಧ್ಯವಾಗುವುದಿಲ್ಲ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಅಧಿಕಾರಿಗಳಾಗಲಿ , ಶಾಸಕರಾಗಲಿ ತಲೆಕೆಡಿಸುಕೊಳ್ಳುತ್ತಿಲ್ಲ, . ಈ ಬಗ್ಗೆ ಬಾಬು ಜಗಜೀವನರಾಂ ಸಂಘದ ಉಪಾಧ್ಯಕ್ಷ ಸತೀಶ್ ರವರು ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ ಉಗ್ರಹೋರಾಟ ಮಾಡುವುದಾಗಿ ತಿಳಿಸಿದರು.